ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. ಸೆಲೆಬ್ರೆಶನ್ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಜನ್ಮದಿನಗಳಿಗೆ ನಾನು ಎಂದಿಗೂ ಉತ್ಸುಕವನಾಗಿಲ್ಲ. ಆದರೆ ಈ ಸಂತೋಷವನ್ನು ನನ್ನ ಸುತ್ತಲಿರುವವರ ಜೊತೆ ನೋಡಿದ್ದೇನೆ. ಈಗ ವಿಶೇಷವಾಗಿ ನನ್ನ ಮಕ್ಕಳೊಂದಿಗೆ, ನನ್ನನ್ನು ಸೇರಿಕೊಳ್ಳುವ ಹಾಗೇ ಮಾಡಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾನು ಚಿರಋಣಿ. ನನ್ನ ಪ್ರತಿಯೊಬ್ಬ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ. ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
View this post on Instagram
ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಯಶ್ ಅವರ ಮುದ್ದಾದ ಕುಟುಂಬದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಥರ್ವ್ ಹಾಗೂ ಐರಾರನ್ನು ಯಶ್ ಅವರು ಎತ್ತಿಕೊಂಡಿದ್ದಾರೆ. ಯಥರ್ವ್ ಕೇಕ್ನ್ನು ಕತ್ತರಿಸುತ್ತಿದ್ದಾನೆ. ಪತ್ನಿ ರಾಧಿಕಾ ಪಂಡಿತ್, ಐರಾ ಕೂಡಾ ಈ ಫೋಟೋದಲ್ಲಿ ಇದ್ದಾರೆ.
ಪುತ್ರಿ ಐರಾ ಮತ್ತು ಪುತ್ರ ಯಥರ್ವ್ ಸೇರಿ ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥರ್ವ್ ಅಂಗೈ ಮುದ್ರೆ ಒತ್ತಿದ್ದಾರೆ. ಹ್ಯಾಪಿ ಬರ್ತಡೆ ಡಡ್ಡಾ ಎಂದು ಬರೆಯಲಾಗಿರುವ ಗಿಫ್ಟ್ ನೀಡಿದ್ದಾರೆ. ಈ ಫೋಟೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್
ಓಮಿಕ್ರಾನ್, ಕೊರೊನಾ ಸೋಂಕಿನ ಭೀತಿ ಎಲ್ಲೆಡೆ ಇರುವುದರಿಂದ ಮನೆಯಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಯಶ್ ಜನ್ಮದಿನವಾದ ಇಂದು ಕರ್ನಾಟಕದಲ್ಲಿ ವಾರಾಂತ್ಯದ ಕಫ್ರ್ಯೂ ಇದೆ. ಈ ಕಾರಣಕ್ಕೆ ಯಶ್ ಮನೆ ಸಮೀಪ ತೆರಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ರಾಜ್ಯದಲ್ಲೊಂದೇ ಅಲ್ಲದೇ ದೇಶಾದ್ಯಂತ ಶುಭಕೋರುತ್ತಿದ್ದಾರೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್