– ಬೆತ್ತಲೆ ದೇಹ ತೋರಿಸುವಂತೆ ಮಗಳಿಗೂ ಅಶ್ಲೀಲ ಮೆಸೇಜ್; ಸಂತ್ರಸ್ತೆ ಆರೋಪ
ಯಾದಗಿರಿ: ಪೊಲೀಸ್ ಕಾನ್ಸ್‌ಟೆಬಲ್‌ವೊಬ್ಬ ತನ್ನ ಸೋದರನೊಂದಿಗೆ ಸೇರಿ ಕಳೆದ 7 ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬರು ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ (Yadgir Women Police Station) ದೂರು ದಾಖಲಿಸಿದ್ದಾರೆ.
ಕಾನ್ಸ್‌ಟೆಬಲ್ ರಮೇಶ ಹಾಗೂ ಜೆಸ್ಕಾಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣ್ ಸಹೋದರರ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಸಂತಾನಹರಣ ಚಿಕಿತ್ಸೆ ವೇಳೆ ತಾಯಿ ಸಾವು – ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ಕುಟುಂಬಸ್ಥರ ಆರೋಪ
ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ನಿವಾಸಿಯಾಗಿರುವ ಸಂತ್ರಸ್ತೆ, ಕಳೆದ 7 ವರ್ಷದಿಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಇಬ್ಬರು ಸೋದರರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರು ಆರೋಪಿಗಳಿಗೆ ಮಹಿಳೆ ಸಂಬಂಧದಲ್ಲಿ ಚಿಕ್ಕಮ್ಮ ಆಗಬೇಕು ಎನ್ನಲಾಗಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ
ಮಗಳಿಗೂ ಅಶ್ಲೀಲ ಮೆಸೇಜ್
ಇಬ್ಬರು ಸಹೋದರರು ಪ್ರಾಣ ಬೆದರಿಕೆ ಹಾಕಿ ಹಲವುಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೊತೆಗೆ ಜೊತೆಗೆ ನನ್ನ ಮಗಳು 14 ವರ್ಷದವಳಾಗಿದ್ದಾಗಿನಿಂದಲೂ ಅಶ್ಲೀಲವಾಗಿ ವಾಟ್ಸಪ್ ಮೆಸೇಜ್ ಕಳುಹಿಸ್ತಿದ್ದಾರೆ. ಬಟ್ಟೆ ಬಿಚ್ಚಿ ಬೆತ್ತಲೆ ದೇಹ ತೋರಿಸು ಅಂತ ಪೀಡಿಸುತ್ತಿದ್ದಾರೆ. ಹೀಗಾಗಿ ಇಬ್ಬರು ಸಹೋದರರಿಂದ ಮಾನಸಿಕ ಹಿಂಸೆ ಅನುಭಿಸುತ್ತಿದ್ದೇನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.