ಲಂಡನ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಈ ನಡುವೆ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಳೆದುಕೊಂಡಿದೆ.
Advertisement
ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್ ಪಾಯಿಂಟ್ ಏರಿಕೆ ಆಗಬೇಕಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‍ನಿಂದಾಗಿ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಮತ್ತು ಪಂದ್ಯದ ಶುಲ್ಕ ಶೇ.40 ರಷ್ಟು ದಂಡ ಕಟ್ಟಿದೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?
Advertisement
We’ve just chased 299 in 50 overs in a Test match on day five ????
Scorecard & Videos: https://t.co/ffFnHnaIPX
???????????????????????????? #ENGvNZ ???????? pic.twitter.com/EPG1oNUWuD
— England Cricket (@englandcricket) June 14, 2022
Advertisement
ಐಸಿಸಿ ನಿಯಮದ ಪ್ರಕಾರ ಪಂದ್ಯವನ್ನು ನಿಗದಿತ ವೇಳೆಯಲ್ಲಿ ಮುಗಿಸಲು ವಿಫಲವಾಗುವ ತಂಡಕ್ಕೆ ಪಂದ್ಯದ ಶುಲ್ಕ ಶೇ.20 ದಂಡ ಮತ್ತು ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತಗೊಳಿಸುವ ನಿರ್ಣಯ ಕೈಗೊಂಡಿತ್ತು. ಈ ನಿಯಮದ ಪ್ರಕಾರ ಇಂಗ್ಲೆಂಡ್ ತಂಡ ತವರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಮುಗಿಸಲು ವಿಫಲವಾಗಿತ್ತು. ಹಾಗಾಗಿ ಮ್ಯಾಚ್ ರೇಫ್ರಿ ರೀಚಿ ರಿಚರ್ಡ್ಸನ್ ಇಂಗ್ಲೆಂಡ್ ತಂಡಕ್ಕೆ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ
Advertisement
ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಅವರ ಭರ್ಜರಿ ಚೇಸಿಂಗ್ ಮೂಲಕ ಇಂಗ್ಲೆಂಡ್ ತಂಡ 5 ವಿಕೆಟ್‍ಗಳ ಜಯ ದಾಖಲಿಸಿತ್ತು. ಅಲ್ಲದೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.