ಮುಂಬೈ: ಇಲ್ಲಿನ ಚಂದ್ರಾಪುರದಲ್ಲಿ ಅಯೋಧ್ಯೆಯ (Ayodhya) ಬಾಲರಾಮನ ಪ್ರಾಣಪ್ರತಿಷ್ಠಾಪನಾ (Pran Pratishtha) ಸಮಾರಂಭವನ್ನು ರಾಮಭಕ್ತರು ವಿಶೇಷವಾಗಿ ಆಚರಿಸಿದ್ದಾರೆ. ಸುಮಾರು 33,258 ಮಣ್ಣಿನ ಹಣತೆಗಳನ್ನು ಬೆಳಗಿಸಿ `ಸಿಯಾವರ್ ರಾಮಚಂದ್ರ ಕೀ ಜೈ’ ಎಂದು ಬರೆದಿದ್ದಾರೆ.
ರಾಮಭಕ್ತರ ಈ ವಿಶೇಷ ಸಾಧನೆ ಗಿನ್ನಿಸ್ ದಾಖಲೆ ಸೇರಿದೆ. ಶನಿವಾರ ರಾತ್ರಿ ಇಲ್ಲಿನ ಚಂದಾ ಕ್ಲಬ್ ಮೈದಾನದಲ್ಲಿ ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರ ಸಮ್ಮುಖದಲ್ಲಿ ರಾಮಭಕ್ತರು ಈ ಕಾರ್ಯಕ್ರಮ ನಡೆಸಿದ್ದಾರೆ. ಈ ಮೂಲಕ ಚಂದ್ರಾಪುರದ ಜನ ವಿಶೇಷ ಸಾಧನೆಗೈದಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!
Advertisement
ಗಿನ್ನೆಸ್ ವಿಶ್ವ ದಾಖಲೆಯ ಮಿಲಿಂದ್ ವರ್ಲೆಕರ್ ಮತ್ತು ಪ್ರಸಾದ್ ಕುಲಕರ್ಣಿ ಅವರು ಈ ಸಾಧನೆಯನ್ನು ಪ್ರಮಾಣೀಕರಿಸುವ ದಾಖಲೆಯನ್ನು ಭಾನುವಾರ ಬೆಳಗ್ಗೆ ಮುಂಗಂತಿವಾರ್ ಅವರಿಗೆ ಹಸ್ತಾಂತರಿಸಿದ್ದಾರೆ.
Advertisement
Advertisement
ಸೋಮವಾರ (ಜ.22) ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಿಂಗಾರಗೊಂಡಿದೆ. ಈ ಸಮಾರಂಭದಿಂದ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಜನ ತಮ್ಮ ಸುತ್ತಮುತ್ತಲಿನ ದೇವಾಲಯಗಳು ಸೇರಿದಂತೆ, ಮನೆಯಲ್ಲೂ ಈ ಸಮಾರಂಭವನ್ನು ದೀಪಾವಳಿಯಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಗಣ್ಯರು ಬಾಲರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದು, ಅಯೋಧ್ಯೆಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ