ಬೆಂಗಳೂರು: ವಿಶ್ವ ಡ್ರಗ್ಸ್ ನಿಷೇಧ ದಿನದ (World Drug Prohibition Day) ಹಿನ್ನೆಲೆ ಬೆಂಗಳೂರು (Bengaluru) ನಗರದಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆ ತಡೆಯುವ ಸಲುವಾಗಿ ಪೊಲೀಸರು (Police) ವಿಶೇಷ ಕಾಳಜಿ ವಹಿಸಿದ್ದಾರೆ.
ಡ್ರಗ್ಸ್ ನಿಷೇಧ ದಿನದ ಅಂಗವಾಗಿ ಸೋಮವಾರ ಪೊಲೀಸರು ಬೆಂಗಳೂರು ನಗರದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ (Students) ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮನ್ ಗುಪ್ತ ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು (Awareness) ಮೂಡಿಸುವ ಕೆಲಸ ಮಾಡಿದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡ ಸಿಎಂ
Advertisement
Advertisement
ನಗರದ 388 ಶಾಲೆಗಳು, 253 ಕಾಲೇಜುಗಳು ಹಾಗೂ 51 ವೃತ್ತಿ ನಿರತ ಕಾಲೇಜುಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಇದರ ಜೊತೆಗೆ ಬಿಸಿಪಿ ಎನ್ ಡಿಪಿಎಸ್ ಪೋರ್ಟಲ್ ಅನಾವರಣ ಮಾಡಿದ ಪೊಲೀಸ್ ಕಮೀಷನರ್, ಡ್ರಗ್ಸ್ ಸೇವನೆ ಮತ್ತು ಕಳ್ಳಸಾಗಣೆ ಬಗ್ಗೆ ಪ್ರತಿಜ್ಞೆ ಮಾಡಿದವರಿಗೆ ಪ್ರಮಾಣ ಪತ್ರ ನೀಡಿದರು. ಇದನ್ನೂ ಓದಿ: ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಬಳಿಕ ಬಂತು ಸರ್ಕಾರಿ ಬಸ್
Advertisement
Advertisement
ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಹೆಚ್ಚುತ್ತಿದ್ದು, ಇದರ ಪರಿಣಾಮ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಸಲುವಾಗಿ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಮಾಡಬೇಕು ಎಂಬುದು ಎಲ್ಲರ ಆಶಯ. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್.ಡಿ ಕುಮಾರಸ್ವಾಮಿ