ನವದೆಹಲಿ: ವಿಶೇಷ ಆರ್ಥಿಕ ವಲಯ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ಅವಧಿಗೆ ಮನೆಯಿಂದ ಕೆಲಸ ಮಾಡುವ (WFH) ಅವಕಾಶವಿದ್ದು, ಒಟ್ಟು ಉದ್ಯೋಗಿಗಳ ಪೈಕಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನಿಯಮವನ್ನು ವಿಸ್ತರಿಸಬಹುದು ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
Advertisement
ಅದಕ್ಕಾಗಿ ವಾಣಿಜ್ಯ ಇಲಾಖೆಯು ವಿಶೇಷ ಆರ್ಥಿಕ ವಲಯಗಳ ನಿಯಮ -2006 ರಲ್ಲಿ ವರ್ಕ್ ಫ್ರಮ್ ಹೋಂಗಾಗಿ ಹೊಸ ನಿಯಮ 43ಎ ಅನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZ) ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿ – ನಿಬಂಧನೆ ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ- ವಜಾಗೊಂಡಿದ್ದ ಕಾರ್ಮಿಕ ಮರು ನೇಮಕ
Advertisement
Advertisement
ಹೊಸ ನಿಯಮವು ವಿಶೇಷ ಆರ್ಥಿಕ ವಲಯ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನೀಡುತ್ತದೆ. ಇವರಲ್ಲಿ ಐಟಿ ಅಥವಾ ಐಟಿಇಎಸ್ ಎಸ್‌ಇಜೆಡ್ ಘಟಕಗಳ ಉದ್ಯೋಗಿಗಳು, ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಆಫ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರು ಈ ನಿಯಮಕ್ಕೆ ಒಳಪಡಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬೈಕ್, ಕಾರು ನಡುವೆ ಭೀಕರ ಅಪಘಾತ- ಬಾಲಕ ಸೇರಿ ಒಂದೇ ಕುಟುಂಬದ ಇಬ್ಬರ ಸಾವು
Advertisement
ಮನೆಯಿಂದ ಕೆಲಸ ಮಾಡುವುದನ್ನು ಈಗ ಗರಿಷ್ಠ ಒಂದು ವರ್ಷದ ಅವಧಿಗೆ ಅನುಮತಿಸಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಇನ್ನೊಂದು ವರ್ಷಕ್ಕೆ ಜಿಲ್ಲಾಧಿಕಾರಿ ಒಂದು ಬಾರಿಗೆ ಮಾತ್ರ ಮಾತ್ರ ವಿಸ್ತರಿಸಬಹುದಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.