BelgaumCrimeDistrictsKarnatakaLatestMain Post

ಬೈಕ್, ಕಾರು ನಡುವೆ ಭೀಕರ ಅಪಘಾತ- ಬಾಲಕ ಸೇರಿ ಒಂದೇ ಕುಟುಂಬದ ಇಬ್ಬರ ಸಾವು

Advertisements

ಬೆಳಗಾವಿ: ಬೈಕ್ ಮತ್ತು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆ ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದ ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊತಾಲೂಕಿನ ಚಿವಟಗುಂಡಿ ಗ್ರಾಮದ ಸಂದೀಪ ಸಿದ್ದಪ್ಪ ಮಲ್ಲೂರ (11) ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಿವಪ್ಪ ಬಸವಂತಗೌಡ ಮಲ್ಲೂರ (46) ಬೆಳಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹಾಗೂ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರ ವೀರಣ್ಣ ಚನ್ನಬಸಪ್ಪ ಬಗನಾಳ (32) ಅವರನ್ನು ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಶೃಂಗೇರಿಗೆ ಶ್ರೀಗಳಿಗೆ ಅಪಮಾನಗೈದ ವ್ಯಕ್ತಿಗೆ 10 ಸಾವಿರ ದಂಡ, 3 ವರ್ಷ ಜೈಲು

crime

ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿದ್ದ ಕಾರು, ಬೆಳವಡಿಯಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಮತ್ತು ಕಾರು ನಜ್ಜುಗುಜ್ಜಾಗಿದೆ. ಘಟನೆ ಸಂಬಂಧಿಸಿ ಬೆಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್‌ಗಳೇ ಟಾಪ್

Live Tv

Leave a Reply

Your email address will not be published.

Back to top button