ಕಾರವಾರ: ಸತೀಶ್ ಜಾರಕಿಹೊಳಿ (Satish Jarkiholi) ಒಬ್ಬ ನಾಸ್ತಿಕ. ಹಿಂದೂ (Hindu) ವಿರೋಧಿ ಸ್ಮಶಾನದಲ್ಲಿ ಪೂಜೆ, ಸ್ಮಶಾನದಲ್ಲಿ ಮದುವೆ, ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ಧದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಹಿಂದೂಗಳ ಬಳಿ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಆಗ್ರಹಿಸಿದ್ದಾರೆ.
Advertisement
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್‍ನವರಿಗೆ (Congress) ಇನ್ನೂ ಕೂಡ ಬುದ್ಧಿ ಬಂದಿಲ್ಲ. ಹಿಂದುತ್ವ, ಹಿಂದೂಗಳನ್ನು, ಹಿಂದೂಧರ್ಮ, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪುರವರು ಹಿಂದೂ, ಜೈನ, ಸಿಖ್, ಕ್ರಿಶ್ಚಿಯನ್ ಎಂಬ ಶಬ್ಧವನ್ನು ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಫೌಜ್ ಎಂದು ಸುಭಾಷ್ ಚಂದ್ರಬೋಸ್ ರವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್, ಸಾವರ್ಕರ್ ಕೂಡ ಈ ಶಬ್ಧವನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ
Advertisement
Advertisement
ಸುಪ್ರೀಂಕೋರ್ಟ್ ಕೂಡ 25 ವರ್ಷಗಳ ಹಿಂದೆ ಹಿಂದೂ ಧರ್ಮ “ವೇ ಆಫ್ ಲೈಫ್ ” ಅತ್ಯಂತ ಒಳ್ಳೆಯ ಜೀವನದ ಪದ್ಧತಿ ಎಂದು ಹೇಳಿಕೆ ಕೊಟ್ಟಿದೆ. ಹಾಗಾದ್ರೆ ಸುಪ್ರೀಂಕೋರ್ಟ್‍ನವರು ಮೂರ್ಖರ? ಹಿಂದೂ ಶಬ್ಧ ಜಾತಿ ಸೂಚಕವಲ್ಲ. ಮತ ಸೂಚಕವಲ್ಲ. ಯಾವುದೇ ರೀತಿ ಸಂಬಂಧವಿಲ್ಲದ ಜೀವನದ ಪದ್ಧತಿ ಇರುವ ಈ ಶಬ್ಧಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧಿಸದಿದ್ರೆ ಹೆಣ್ಮಕ್ಕಳು ಧರಣಿಗೆ ಕೂರ್ತಿವಿ ಅಂದಿದ್ದಾರೆ: ಸಿದ್ದರಾಮಯ್ಯ