ದುಬೈ: ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ನ್ಯೂಜಿಲೆಂಡ್ ಮಹಿಳಾ ತಂಡ (New Zealand Womens Team) ಕೋಟಿ ಕೋಟಿ ನಗದು ಬಹುಮಾನ ಬಾಚಿಕೊಂಡಿದೆ. ಅಲ್ಲದೇ 2ನೇ ಬಾರಿಗೆ ರನ್ನರ್ ಪ್ರಶಸ್ತಿ ತನ್ನದಾಗಿಸಿಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸಹ ನಗದು ಬಹುಮಾನ ಪಡೆದುಕೊಂಡಿದೆ.
New Zealand lift the Women’s #T20WorldCup ???? for the very first time ????#WhateverItTakes #SAvNZ pic.twitter.com/ytT6hk8Y1o
— ICC (@ICC) October 20, 2024
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 32 ರನ್‌ಗಳ ಗೆಲುವು ಸಾಧಿಸಿದ ಕಿವೀಸ್ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಟ್ರೋಫಿಯೊಂದಿಗೆ 19.6 ಕೋಟಿ ರೂ. (2.34 ದಶಲಕ್ಷ ಡಾಲರ್) ನಗದು ಬಹುಮಾನವನ್ನು (Prize Money) ತನ್ನದಾಗಿಸಿಕೊಂಡಿತು. ಜೊತೆಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಬರೋಬ್ಬರಿ 9.8 ಕೋಟಿ ರೂ. (1.17 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಂಡಿತು.
ಭಾರತಕ್ಕೆ ಸಿಕ್ಕಿದ್ದೆಷ್ಟು?
2024ರ ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯ ಬಹುಮಾನವು ವಿನ್ನರ್ ಮತ್ತು ರನ್ನರ್ ಅಪ್‌ಗಳಿಗೆ ಸೀಮಿತವಾಗಿರದೇ ಸೆಮಿಸ್, ಲೀಗ್ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂರು ತಂಡಗಳಿಗೂ ಬಹುಮಾನ ನೀಡಲಾಗುತ್ತಿದೆ. ಸೆಮಿ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ 5.7 ಕೋಟಿ ರೂ. (6,75,000 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಂಡಿದೆ. ಇದನ್ನೂ ಓದಿ: 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಗೆದ್ದ ಕಿವೀಸ್ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?
ಸದ್ಯ ಗುಂಪು ಹಂತದ ಪಂದ್ಯಗಳಲ್ಲಿ ಇನ್ನೂ ರೇಟಿಂಗ್ಸ್ ನಿಗದಿಪಡಿಸಿಲ್ಲ. ಆದ್ರೆ ಲೀಗ್ ಸುತ್ತಿನ 4 ಪಂದ್ಯಗಳ ಪೈಕಿ 2 ರಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ (Team India Womens) 2.25 ಕೋಟಿ ರೂ. (2,70,000 ದಶಲಕ್ಷ ಡಾಲರ್) ಬಹುಮಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಲೀಗ್ ಸುತ್ತಿನ ಮೂರು ತಂಡಗಳಿಗೂ ಒಂದೇ ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್ ಕಿರೀಟ
ಕಿವೀಸ್‌ಗೆ ಐತಿಹಾಸಿಕ ಗೆಲುವು:
ಈ ಹಿಂದೆಯೂ ಎರಡು ಬಾರಿ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ಮಹಿಳಾ ತಂಡ 2009ರಲ್ಲಿ ಇಂಗ್ಲೆಂಡ್ ವಿರುದ್ಧ, 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇನ್ನೂ 2023ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಕಿವೀಸ್ ಮಹಿಳಾ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸೋಫಿ ಡಿವೈನ್ ನಾಯಕತ್ವದ ನ್ಯೂಜಿಲೆಂಡ್ ಆರಂಭಿಕ ಹಿನ್ನಡೆ ಅನುಭವಿಸಿದರೂ ಸವಾಲಿನ ಮೊತ್ತ ಕಲೆಹಾಕಿತು. 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಗೆಲುವಿಗೆ 159 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗಳಿಗೆ 126 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ ಸೋಲು ಕಂಡಿತು. ಇದನ್ನೂ ಓದಿ: ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್ ಹೊಸ ಆಫರ್