ಬೆಂಗಳೂರು: ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುತ್ತೆ ಅಂತ ಬಂದಿದ್ದ ಮಹಿಳೆಯೊಬ್ಬರು ಸಚಿವ ಸಾ.ರಾ ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊದಲೇ ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆ ಮಾಡುವುದು ಅಂತಾ ಗೊತ್ತಿರುತ್ತಿದ್ದರೆ ಬರುತ್ತಾನೆ ಇರಲಿಲ್ಲ ಅಂತ ಸಚಿವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
Advertisement
ನಾಲ್ಕೂವರೆ ಸಾವಿರಕ್ಕೆ ಹೆಸರುವಾಸಿಯಾಗಿದ್ದ ಮೈಸೂರು ಸಿಲ್ಕ್ ಸೀರೆ ಕೊಡುತ್ತಾರೆ ಅಂತಾ ಗೌರಿ ಹಬ್ಬದ ತಯಾರಿಯನ್ನೂ ಬಿಟ್ಟು ಬಹುತೇಕ ಮಹಿಳೆಯರು ಎಫ್‍ಕೆಸಿಸಿಐ ಮಳಿಗೆ ಇಂದು ಬಂದಿದ್ದರು. ಹೀಗಾಗಿ ಕೆ.ಜಿ ರೋಡ್‍ನಲ್ಲಿರೋ ಎಫ್‍ಕೆಸಿಸಿಐ ಮುಂದೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು. ಸೀರೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರನ್ನು ಸಂಭಾಳಿಸಲು ಎಫ್‍ಕೆಸಿಸಿಐ ಅಧಿಕಾರಿಗಳು ಪೊಲೀಸ್ ಭದ್ರತೆಯನ್ನು ಪಡೆದುಕೊಂಡಿದ್ದಾರೆ.
Advertisement
Advertisement
ಮಹಿಳೆಯರನ್ನು ಕ್ಯೂನಲ್ಲಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕುನುಗ್ಗಲಿನ ಕ್ಯೂನಲ್ಲಿ ನಿಂತು ಲಕ್ಕಿ ಡ್ರಾನಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಕಿದ್ದಾರೆ. ಕೇವಲ ಒಂದೂವರೆ ಸಾವಿರ ಜನ ಮಹಿಳೆಯರಿಗೆ ಮಾತ್ರ ಸಿಗುತ್ತದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆಯರು ಸಚಿವರ ವಿರುದ್ಧ ಗರಂ ಆಗಿದ್ದಾರೆ.
Advertisement
`ರಿಯಾಯಿತಿ ದರದಲ್ಲಿ ಸೀರೆ ನೀಡುವುದಾಗಿ ಸಚಿವರು ಹೇಳಿದ್ದರು. ಆದರೆ ಈಗ ಲಕ್ಕಿ ಡ್ರಾ ಅಂತಾ ಹೇಳುತ್ತಿದ್ದಾರೆ. ಇಷ್ಟು ಜನರಿದ್ದಾರೆ. ನಮಗೆ ಸೀರೆ ಸಿಗುವುದೇ ಡೌಟ್ ಅಂತಾ ಮಹಿಳೆಯರು ಸಚಿವರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv