ಬೆಂಗಳೂರು: ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಮ್ಮ ವಿರುದ್ಧದ ಆರೋಪಕ್ಕೆ ಅರ್ಚಕ ಪ್ರತಿದೂರು ದಾಖಲಿಸಿದ್ದು, ಈಗ ದೂರುದಾರೆ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅರ್ಚಕ ಉನ್ನಿ ದಾಮೋದರನ್ ವಿರುದ್ಧ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಚಕ ದಾಮೋದರ, ದೇವಸ್ಥಾನ ಮ್ಯಾನೇಜರ್ ಅರುಣ್ ಎಂಬಾತನ ಬಂಧನವಾಗಿತ್ತು. ದೂರುದಾರೆಗೆ ಕೇರಳದ ದೇವಸ್ಥಾನಕ್ಕೆ ಕರೆಸಿ ವಿಶೇಷ ಪೂಜೆ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಅಂತಾ ಆರೋಪಿಸಲಾಗಿತ್ತು.
ಈ ಪ್ರಕರಣದ ವಿರುದ್ಧ ಅರ್ಚಕರ ಕುಟುಂಬದವರು ಗೃಹ ಸಚಿವರನ್ನು ಭೇಟಿ ಮಾಡಿ, ಇದು ಸುಳ್ಳು ದೂರು ಅಂತಾ ಪ್ರತಿದೂರು ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಅದೊಂದು ಸುಳ್ಳು ದೂರು ಎನ್ನುವುದು ಗೊತ್ತಾಗಿತ್ತು. ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಉನ್ನಿ ದಾಮೋದರರನ್ನು ಆ ಸ್ಥಾನದಿಂದ ಕೆಳಗಿಳಿಸಲು ಮತ್ತು ಎರಡು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರೆ ಮತ್ತು ಆಕೆಯ ನಾಲ್ವರು ಸಹಚರರು ಸೇರಿ ಐವರನ್ನು ಬಂಧಿಸಲಾಗಿದೆ.