ಮುಂಬೈ: ಅಗ್ನಿವೀರ್ (Agniveer) ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ (Woman) ಮುಂಬೈನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಯುವತಿ ಕೇರಳದ ನಿವಾಸಿಯಾಗಿದ್ದು ನೌಕಾಪಡೆ ತರಬೇತಿ ಪಡೆಯಲು 2 ವಾರಗಳ ಹಿಂದೆ ಮುಂಬೈಗೆ ಬಂದಿದ್ದಳು. ಸೋಮವಾರ ಬೆಳಗ್ಗೆ ಯುವತಿ ಹಾಗೂ ಆಕೆಯ ಗೆಳೆಯ ಜಗಳವಾಡಿಕೊಂಡಿದ್ದು, ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುವತಿಯ ಶವ ಮಲಾಡ್ ವೆಸ್ಟ್‌ನ ಐಎನ್‌ಎಸ್ ಹಮ್ಲಾ ಬೇಸ್‌ನಲ್ಲಿರುವ ಆಕೆಯ ಕೋಠಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಾಳವಾನಿ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್ ಚಿತ್ರ ಪ್ರದರ್ಶಿಸಿದ ಪಾಕ್ ಬ್ಯಾಟರ್‌ಗೆ ದಂಡ
ಅಗ್ನಿಪಥ ಯೋಜನೆಯಡಿ ‘ಅಗ್ನಿವೀರ್’ ಸೈನಿಕರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಇದರಲ್ಲಿ 6 ತಿಂಗಳ ತರಬೇತಿ ಮತ್ತು ಮೂರುವರೆ ವರ್ಷಗಳ ಕಾಲ ಕರ್ತವ್ಯದಲ್ಲಿರಬೇಕು. ಇದರ ಬಳಿಕ ಅವರು ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಗ್ರೇಟ್ ಸುರಂಗ ಆಪರೇಷನ್ – ಸಾವು ಗೆದ್ದ 41 ಕಾರ್ಮಿಕರು, ಯಾವುದೇ ಕ್ಷಣದಲ್ಲಿ ಹೊರ ಬರುವ ಸಾಧ್ಯತೆ