ಲಕ್ನೋ: ಮಹಿಳೆಯೊಬ್ಬಳು ಹಣದ ಆಸೆಗಾಗಿ ಪುರುಷನ ವೇಷ ಧರಿಸಿ ಇಬ್ಬರು ಯುವತಿಯರನ್ನು ಮದುವೆ ಆಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಬಿಜ್ನೋರ್ ಜಿಲ್ಲೆಯ ಧಾಮಪುರ ಎಂಬಲ್ಲಿ ನಡೆದಿದೆ. ಎರಡನೇ ಪತ್ನಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ದೂರಿನ್ವಯ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
26 ವರ್ಷದ ಸ್ವೀಟಿ ಸೇನ್ ಹುಡುಗರ ವೇಷ ಧರಿಸಿ ಎರಡು ಮದುವೆಯಾದ ಮಹಿಳೆ. ಸ್ವೀಟಿ ಮೊದಲಿನಿಂದಲೂ ಹುಡುಗರಂತೆ ಕೂದಲು ಕಟ್ ಮಾಡಿಸಿಕೊಂಡು, ಸಿಗರೇಟ್ ಸೇದುತ್ತಾ, ಬೈಕ್ ಸ್ಟಂಟ್ ಮಾಡಿಕೊಂಡು ಯುವಕರಂತೆ ಬಿಂಬಿತವಾಗಿದ್ದಳು. 2013ರಲ್ಲಿ ಕೃಷ್ಣಾ ಸೇನ್ ಎಂಬ ಹೆಸರಲ್ಲಿ ಫೇಸ್‍ಬುಕ್ ಖಾತೆಯನ್ನು ತರೆದು ಅಲ್ಲಿಯೂ ತಾನು ಪುರುಷ ಎಂದು ಹೇಳಿಕೊಂಡಿದ್ದಳು. 2014ರಲ್ಲಿ ಸ್ವೀಟಿ ತನ್ನ ಕುಟುಂಬಸ್ಥರೊಂದಿಗೆ ಉತ್ತರಾಖಂಡ್‍ನ ಕಥ್‍ಗೊದಮ್ ಗೆ ಪ್ರಯಾಣಿಸುವಾಗ ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ 22 ವರ್ಷದ ಯುವತಿಯನ್ನು ಭೇಟಿಯಾಗಿದ್ದಾಳೆ. ಈ ವೇಳೆ ಸ್ವೀಟಿ ತಾನು ಗಂಡಸು ಎಂಬುವುದನ್ನು ಮನವರಿಕೆ ಮಾಡಿಸಿ, 2014ರಲ್ಲಿ ಆಕೆಯನ್ನು ಮದುವೆ ಆಗಿದ್ದಾಳೆ ಎಂದು ನೈನಿತಾಲ್ ಎಸ್‍ಎಸ್‍ಪಿ ಜನ್ಮೇಜಯ್ ಖಂದುರಿ ತಿಳಿಸಿದ್ದಾರೆ.
Advertisement
Advertisement
ಮೊದಲ ಪತ್ನಿ ಜೊತೆ ಸ್ವೀಟಿ ನೈನಿ ತಾಲ್ ಜಿಲ್ಲೆಯ ಹಲದ್ವಾನಿ ಪಟ್ಟಣದಲ್ಲಿ ಬಾಡಿಗೆ ಮನೆ ಪಡೆದುಕೊಂಡು ವಾಸವಾಗಿದ್ದಳು. ಆದ್ರೆ ಸ್ವೀಟಿ ಮೊದಲ ಪತ್ನಿಗೆ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಳು.
Advertisement
2016ರಲ್ಲಿ ಸ್ವೀಟಿ ನೈನಿತಾಲ್ ಜಿಲ್ಲೆಯ ಕಲಧುಂಗಿ ಪ್ರದೇಶದ ನಿವಾಸಿಯಾಗಿರುವ 20 ವರ್ಷದ ಯುವತಿಯೊಂದಿಗೆ ಎರಡನೇ ಮದುವೆ ಆಗಿದ್ದಾಳೆ. ಮದುವೆ ಬಳಿಕ ಎರಡನೇ ಪತ್ನಿಯೊಂದಿಗೆ ಹರದ್ವಾರ್ ಪಟ್ಟಣದಲ್ಲಿ ವಾಸವಾಗಿದ್ದಳು.
Advertisement
ಹೆಣ್ತನವನ್ನು ಮರೆ ಮಾಡಿದ್ದು ಹೀಗೆ: ಮದುವೆ ಬಳಿಕ ಸ್ವೀಟಿ ತನ್ನ ಇಬ್ಬರೂ ಪತ್ನಿಯರಿಗೆ ದೇಹವನ್ನು ಮುಟ್ಟಲು ಬಿಡುತ್ತಿರಲಿಲ್ಲ. ಆದರೆ ಲೈಂಗಿಕ ಸಾಧನಗಳನ್ನು ಬಳಸಿಕೊಂಡು ಇಬ್ಬರೊಂದಿಗೂ ಸೆಕ್ಸ್ ನಡೆಸಿದ್ದಳು. ಹೀಗಾಗಿ ಬಹಳ ಸಮಯದವರೆಗೂ ಇಬ್ಬರೂ ಪತ್ನಿಯರಿಗೆ ತಾವು ಮದುವೆಯಾಗಿದ್ದು, ಹುಡುಗನನ್ನು ಹುಡುಗಿಯನ್ನು ಎಂದು ಅರಿವಿಗೆ ಬಂದಿರಲಿಲ್ಲ.
ಗುಟ್ಟು ರಟ್ಟಾಗಿದ್ದು ಹೀಗೆ: 2017ರಲ್ಲಿ ಸ್ವೀಟಿಯ ಮೊದಲ ಪತ್ನಿ ಕಥ್‍ಗೊದಮ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ದಾಖಲಿಸುತ್ತಾರೆ. ಇದೂವರೆಗೂ ನನ್ನ ಪತಿ 8.5 ಲಕ್ಷ ಹಣವನ್ನು ವರದಕ್ಷಿಣೆಯಾಗಿ ಪಡೆದುಕೊಂಡು ಕಾರ್ಖಾನೆಯೊಂದನ್ನು ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಬುಧವಾರ ಪೊಲೀಸರು ಸ್ವೀಟಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ತಾನು ಗಂಡು ಅಲ್ಲ ಹೆಣ್ಣು ಎಂಬ ರಹಸ್ಯ ತಿಳಿಸಿದ್ದಾಳೆ.
ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಯ ಕೇಸಿಗೆ ಸಂಬಂಧಿಸಿದಂತೆ ಸ್ವೀಟಿಯನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿತ್ತು. ಆಕೆ ಹೆಣ್ಣು ಎಂಬುವುದು ನಮ್ಮ ಕಲ್ಪನೆಯಲ್ಲಿಯೂ ಇರಲಿಲ್ಲ. ವಿಚಾರಣೆಯನ್ನು ತೀವ್ರಗೊಳಿಸಿದಾಗ ಆಕೆ ತಾನು ಹೆಣ್ಣು ಅಂತಾ ಹೇಳಿಕೊಂಡಿದ್ದಾಳೆ. ಈ ಸಂಬಂಧ ಬುಧವಾರ ಸಂಜೆ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸ್ವೀಟಿ ಅವನಲ್ಲ ಅವಳು ಅಂತಾ ಗೊತ್ತಾಗಿದೆ ಎಂದು ಕಥಗೊದಮ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಆರೋಪಿ ಸ್ವೀಟಿಯನ್ನು ಹಲ್‍ದ್ವಾನಿ ಜೈಲಿನಲ್ಲಿ ಇರಿಸಲಾಗಿದೆ. ಸ್ವೀಟಿಯ ಪೋಷಕರು ಮತ್ತು ಸಂಬಂಧಿಕರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಎರಡು ಮದುವೆಯಲ್ಲಿಯೂ ಸ್ವೀಟಿಯ ಪೋಷಕರು ಭಾಗಿಯಾಗಿದ್ದರು. ಈ ಸಂಬಂಧ ಸ್ವೀಟಿಯ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.