ಮಹಿಳೆಯೊಬ್ಬರು ಮೈ ಮೇಲೆ ಮೆಹಂದಿ ಡಿಸೈನ್ ಬಿಡಿಸಿಕೊಂಡು ಅದನ್ನೇ ಬ್ಲೌಸ್ (Henna Blouse) ಮಾಡಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ದಿ ಮೋಸ್ಟ್ ಅಟ್ರಾಕ್ಟಿವ್ ಉಡುಪುಗಳಲ್ಲಿ ಸೀರೆ ಕೂಡ ಒಂದಾಗಿದೆ. ಸೀರೆಯ ಅಂದವನ್ನು ಹೆಚ್ಚಿಸುವಲ್ಲಿ ಬ್ಲೌಸ್ ಕೂಡ ಅಷ್ಟೇ ಮುಖ್ಯವಾದ ಪಾತ್ರವಹಿಸುತ್ತದೆ. ಸೀರೆಯ ಉಪಯೋಗವೆಂದರೆ ಒಂದು ಸೀರೆಗೆ ಹಲವಾರು ರೀತಿಯ ಡಿಸೈನ್ ಬ್ಲೌಸ್ಗಳನ್ನು ಧರಿಸಬಹುದು. ಆದರೆ ವಿಚಿತ್ರ ಎಂದರೆ ಮಹಿಳೆಯೊಬ್ಬರು ಮೈ ಮೇಲೆ ಮಹೆಂದಿ ಡಿಸೈನ್ ಬಿಡಿಸಿಕೊಂಡು ಅದನ್ನೇ ಬ್ಲೌಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
Advertisement
Advertisement
ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಮಹಿಳೆಯೊಬ್ಬಳು ಬಿಳಿ ಚಿಕಂಕಾರಿ ಸೀರೆಯನ್ನು ಧರಿಸಿದ್ದು, ಅದಕ್ಕೆ ಬಟ್ಟೆಯಿಂದ ವಿನ್ಯಾಸಗೊಳಿಸಿರುವ ಬ್ಲೌಸ್ ಧರಿಸುವುದರ ಬದಲಾಗಿ ಮೆಹಂದಿಯಿಂದ ಮಾಡಿದ ಬ್ಲೌಸ್ ಧರಿಸಿದ್ದಾಳೆ. ಮಹಿಳೆ ಬೆನ್ನಿನ ಸುತ್ತ, ಆಕೆಯ ತೋಳುಗಳ ಮೇಲೆ ಹಾಗೂ ಕತ್ತಿನ ಸುತ್ತ ಮೆಹಂದಿ ಡಿಸೈನ್ ಬಿಡಿಸಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ.
Advertisement
View this post on Instagram
Advertisement
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇಲ್ಲಿಯವರೆಗೂ ಸುಮಾರು 80,000 ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್ಗಳ ಸುರಿಮಳೆಯೇ ಹರಿದುಬರುತ್ತಿದೆ. ಯಾರೋ ಒಬ್ಬರು ಮೆಹಂದಿ ಹಾಕುವುದನ್ನು ಕಲಿಯಬೇಕು ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಾನು ಕ್ಯಾಪ್ಷನ್ ಪೂರ್ತಿ ಓದುವವರೆಗೂ ಇದು ಮೆಹಂದಿ ಡಿಸೈನ್ ಎಂದು ಗೊತ್ತಾಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.