ಬೀಜಿಂಗ್: ಅಕ್ವೇರಿಯಂನಲ್ಲಿ (Aquarium) ಮತ್ಸ್ಯ ಕನ್ಯೆಯ (Mermaid) ವೇಷ ತೊಟ್ಟು ಪ್ರದರ್ಶನ ನೀಡುತ್ತಿದ್ದ ಮಹಿಳೆಯೊಬ್ಬಳ ಮೇಲೆ ದೈತ್ಯ ಮೀನೊಂದು ದಾಳಿ ನಡೆಸಿದ ಘಟನೆ ಚೀನಾದಲ್ಲಿ (China) ನಡೆದಿದೆ.
ಈ ಘಟನೆ ದಕ್ಷಿಣ ಚೀನಾದ ಕ್ಸಿಶುವಾಂಗ್‍ಬನ್ನಾ ಪ್ರಿಮಿಟಿವ್ ಫಾರೆಸ್ಟ್ ಪಾರ್ಕ್‍ನಲ್ಲಿ ನಡೆದಿದೆ. ರಷ್ಯಾದ ಪ್ರದರ್ಶಕಿ ಮಾಷಾ (22) ಮತ್ಸ್ಯ ಕನ್ಯೆಯಂತೆ ವೇಷ ತೊಟ್ಟು ಅಕ್ವೇರಿಯಂನಲ್ಲಿ ಈಜುತ್ತಿದ್ದಾಗ ಮೀನು ಆಕೆಯನ್ನು ಸಮೀಪಿಸಿದೆ. ಈ ವೇಳೆ ಭಯದಿಂದ ಆಕೆ ಜನರೆಡೆ ಕೈ ಬೀಸಿದ್ದಾಳೆ. ಬಳಿಕ ಅಕ್ವೇರಿಯಂನ ಮೇಲೆ ಬರಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಮೀನು ದಾಳಿ ನಡೆಸಿದೆ. ಆದರೂ ಆಕೆ ತಪ್ಪಿಸಿಕೊಂಡು ಮೀನಿನ ದವಡೆಯಿಂದ ಬಚಾವ್ ಆಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Woman performing as a mermaid bitten by a sturgeon in a Chinese Aquarium. pic.twitter.com/LTDSioBve3
— Game of X (@froggyups) January 29, 2025
ದೈತ್ಯ ಮೀನು ಮಾಷಾಳ ಕನ್ನಡಕ ಮತ್ತು ಮೂಗಿನ ತುಣುಕುಗಳನ್ನು ತಿಂದು, ಅವಳ ಕುತ್ತಿಗೆ, ತಲೆ ಮತ್ತು ಕಣ್ಣಿಗೆ ಗಾಯಗಳನ್ನುಂಟುಮಾಡಿದೆ. ಈ ವೇಳೆ ಪ್ರದರ್ಶನ ನೋಡುತ್ತಿದ್ದ ಮಕ್ಕಳು ಮತ್ತು ಜನರು ಭಯದಿಂದ ಕಿರುಚಿದ್ದಾರೆ ಎಂದು ವರದಿಯಾಗಿದೆ.
100 ಡಾಲರ್ ನೀಡಿ ಆ ಘಟನೆಯ ಬಗ್ಗೆ ಮಾತಾಡದಂತೆ ಹೇಳಲಾಗಿದೆ. ನೋವಿನಿಂದ ಬಳಲುತ್ತಿದ್ದರೂ ಸಹ ಮತ್ತೆ ಪ್ರದರ್ಶನ ನೀಡಲು ಬಲವಂತವಾಗಿ ನೀರಿಗೆ ಇಳಿಸಲಾಯಿತು ಎಂದು ಮಾಷಾ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಕ್ವೇರಿಯಂನಲ್ಲಿ ಮೆಕಾಂಗ್ ಮತ್ತು ಯಾಂಗ್ಟ್ಜೆ ನದಿಗಳ ಸ್ಥಳೀಯ ಜಾತಿ ಹಾಗೂ ಅಪರೂಪದ ಉಭಯಚರಗಳನ್ನು ಇರಿಸಲಾಗಿದೆ. ದಾಳಿ ನಡೆಸಿದ ಮೀನು ಸ್ಟರ್ಜನ್ ಜಾತಿಗೆ ಸೇರಿದ್ದಾಗಿದೆ.