15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ – ತಾಯಿ, ಮಗಳು, ಅಪ್ರಾಪ್ತ ಪುತ್ರ ಅರೆಸ್ಟ್!

Public TV
1 Min Read
Jyothi SUHANI

ಬೆಳಗಾವಿ: ನಗರದ (Belagavi) ಅಪಾರ್ಟ್‍ಮೆಂಟ್ ಒಂದರಲ್ಲಿ ಮಹಿಳೆಯನ್ನು ಹತ್ಯೆಗೈದಿದ್ದ ತಾಯಿ, ಮಗಳು ಹಾಗೂ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿಗಳಾದ ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಆರೋಪಿಯ ಅಪ್ರಾಪ್ತ ಪುತ್ರನನ್ನು ಬಂಧಿಸಿದ್ದಾರೆ. ಗಣೇಶಪುರದ ಅಪಾರ್ಟ್‍ಮೆಂಟ್‌ನಲ್ಲಿ ಏ.22 ರಂದು ಅಂಜನಾ ದಡ್ಡೀಕರ್‌ನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲದೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿಗಳು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

ಕೊಲೆಯಾದ ಅಂಜನಾ 15 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿದ್ದರು. ಈ ವೇಳೆ ತಲೆಗೆ ಪೆಟ್ಟಾಗಿ, ಅಂಜನಾ ಸಾವನ್ನಪ್ಪಿದ್ದಳು. ಬಳಿಕ ಅನುಮಾನ ಬರದಂತೆ, ಮಕ್ಕಳನ್ನು ಬಚಾವ್ ಮಾಡಲು ಮಹಿಳೆಯ ಚಿನ್ನಾಭರಣ ಕದ್ದಿದ್ದಳು. ಇಷ್ಟೇ ಅಲ್ಲದೇ ಘಟನೆ ನಡೆದ ದಿನ ಊರಲ್ಲಿ ಇರಲಿಲ್ಲ ಎಂಬಂತೆ ಬಿಂಬಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧರ್ಮ ಕೇಳಿ ಉಗ್ರರಿಂದ ದಾಳಿ – ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ

Share This Article