ಬೆಂಗಳೂರು: ಬಾಡಿಗೆಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು 30ಕ್ಕೂ ಹೆಚ್ಚು ಪೀಸ್ ಆಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ (Fridge) ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಕೊಲೆಗೈದ ಹಂತಕ ಹತ್ಯೆ ಮಾಡಿದ ದಿನ ಮತ್ತು ತಪ್ಪಿಸಿಕೊಳ್ಳಲು ಸಮಯ ಸಿಗುತ್ತದೆ ಎಂಬ ಸಲುವಾಗಿ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬಿಹಾರ ಮೂಲದ ಮಹಾಲಕ್ಷ್ಮಿ (29) ಕೊಲೆಯಾದ ದುರ್ದೈವಿ. ಈಕೆ ಈ ಮೊದಲು ಗಂಡ ಮತ್ತು 4 ವರ್ಷದ ಮಗುವಿನೊಂದಿಗೆ ನೆಲಮಂಗಲದಲ್ಲಿ ವಾಸವಾಗಿದ್ದಳು. ಕಳೆದ 6 ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ಥಾಪ ಉಂಟಾಗಿತ್ತು. ಈ ಹಿನ್ನೆಲೆ ಮಹಾಲಕ್ಷ್ಮಿ ಗಂಡನಿಂದ ದೂರವಾಗಿ 3 ತಿಂಗಳಿನಿಂದ ಒಬ್ಬಂಟಿಯಾಗಿ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagara) ಬಾಡಿಗೆ ಮನೆಯಲ್ಲಿದ್ದರು. ಅಲ್ಲದೇ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಆಕೆ ವಾಸವಿದ್ದ ಮನೆಯಿಂದ ವಾಸನೆ ಬರುತ್ತಿದೆ ಎಂದು ಅವರ ಸಂಬಂಧಿಕರು ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು
Advertisement
Advertisement
ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆ ನಡೆದ ದಿನಾಂಕ ಹೊರಬರುತ್ತಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದರಿಂದ ಕೊಲೆ ನಡೆದ ದಿನ, ಸಮಯ ಪತ್ತೆ ಹಚ್ಚೋದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಸಾವು ಹೇಗಾಯಿತು? ಕೊಲೆ ನಡೆದ ಸಮಯ ಪತ್ತೆ ಹಚ್ಚಲು ಪೋಸ್ಟ್ ಮಾರ್ಟಂ ಮಾಡಲಾಗುತ್ತದೆ. ಆದರೆ ಇಲ್ಲಿ ಹಂತಕನೇ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಲ್ಲದೇ ದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಹೀಗಾಗಿ ಯಾವಾಗ ಕೊಲೆಯಾಗಿದೆ ಎಂದು ಪತ್ತೆ ಮಾಡೋದು ಕಷ್ಟ. ಹಂತಕ ಸಿಕ್ಕ ಬಳಿಕವಷ್ಟೇ ಕೊಲೆ ನಡೆದ ದಿನ ಹಾಗೂ ಕೊಲೆಯ ಉದ್ದೇಶ ಪತ್ತೆಯಾಗಬೇಕಿದೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ
Advertisement
ಪೊಲೀಸರಿಗೆ ಈ ಕೊಲೆ ತನಿಖೆಯೇ ಚಾಲೆಂಜ್ ಆಗಿದೆ. ಎಷ್ಟು ದಿನದ ಹಿಂದೆ ಕೊಲೆಯಾಗಿದೆ ಎನ್ನುವ ಬಗ್ಗೆ ಖಚಿತತೆ ಇಲ್ಲದಿರುವುದರಿಂದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ದಿನದ ಹಿಂದಿನಿಂದ ಈಕೆ ಹೊರಬಂದಿಲ್ಲ ಎನ್ನುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಈಕೆ ಕೆಲಸ ಮಾಡುತ್ತಿದ್ದ ಜಾಗದಲ್ಲೂ ವಿಚಾರಣೆ ನಡೆಸಲಾಗುತ್ತಿದೆ. ಎಷ್ಟು ದಿನದಿಂದ ಕೆಲಸಕ್ಕೆ ಬಂದಿಲ್ಲ? ರಜೆ ಹಾಕುವ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿದ್ರಾ? ಕೆಲಸಗಾರರ ಬಳಿ ಏನಾದ್ರೂ ಹೇಳಿಕೊಂಡಿದ್ರಾ ಹಾಗೂ ಆಕೆಯ ಲಾಸ್ಟ್ ಕಾಲ್ ಬಗ್ಗೆ ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಟವರ್ ಡಂಪ್ ತೆಗೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮರ್ ಪ್ರೀತ್ ಸಿಂಗ್ ವಾಯುಸೇನಾ ಮುಖ್ಯಸ್ಥರಾಗಿ ನೇಮಕ
Advertisement
ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್ ಪ್ಲಾನ್ ಮಾಡಿದ್ನಾ ಎಂಬ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಫ್ರಿಜ್‌ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭದಲ್ಲಿ ಗೊತ್ತಾಗಲ್ಲ. ತಪ್ಪಿಸಿಕೊಳ್ಳಲು ಸಮಯ ಸಿಗುತ್ತೆ ಎಂದು ಈ ಪ್ಲಾನ್ ಮಾಡಿದ್ನಾ? 15 ದಿನದ ಹಿಂದೆ ಕೊಲೆ ಆಗಿದ್ದರೂ ಕೂಡ ವಾಸನೆ ಬರೋದಿಲ್ಲ ಎಂದು ಫ್ರಿಡ್ಜ್ ಕೂಡ ಆನ್ ಮಾಡಿ ಇಟ್ಟುಹೋಗಿದ್ನಾ ಎಂಬ ಸಾಕಷ್ಟು ಅನುಮಾನ ಹುಟ್ಟುಕೊಂಡಿವೆ. ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತೆ ಅಂತಲೇ ಈ ರೀತಿ ಮಾಡಿದ್ನಾ ಎಂಬ ಸಂಶಯ ಮೂಡಿದೆ. ಆರೋಪಿಯ ಜಾಡು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೋದಿ ಅಮೆರಿಕ ಪ್ರವಾಸ – 2 ಸ್ಟೇಜ್, 400 ಕಲಾವಿದರು
ಕೊಲೆಯಾದ ಮಹಾಲಕ್ಷ್ಮಿ ಗಂಡ ಹೇಮಂತ್ ದಾಸ್ ಮಗುವಿನೊಂದಿಗೆ ನೆಲಮಂಗಲ ನಗರದ ಲೋಹತ್ ನಗರದಲ್ಲಿ ವಾಸ ಮಾಡುತ್ತಿದ್ದರು. 2023ರ ಡಿಸೆಂಬರ್ 1ರಂದು ಗಂಡ-ಹೆಂಡತಿ ವಿಚಾರದಲ್ಲಿ ಗಲಾಟೆ ನಡೆದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಎನ್‌ಸಿ ದಾಖಲು ಮಾಡಿ ಇಬ್ಬರನ್ನೂ ಕರೆಸಿ ರಾಜಿ ಸಂಧಾನ ಮಾಡಿದ್ದರು. ನಂತರ ಇಬ್ಬರು ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು
ಹೇಮಂತ್ ದಾಸ್ ನೇಪಾಳ ಮೂಲದವರಾಗಿದ್ದುಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಗಂಡನಿಗೆ ಅನುಮಾನವಿತ್ತಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಪತ್ನಿಗೆ ಅನ್ಯ ಸಮುದಾಯದ ಯುವಕನ ಸಂಪರ್ಕ ಇದ್ದ ಬಗ್ಗೆ ಪತಿ ಹೇಮಂತ್ ದಾಸ್ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪತ್ನಿಗೆ ನೆಲಮಂಗಲದಲ್ಲಿ ಮೊಬೈಲ್ ಅಂಗಡಿ ಕೂಡ ಇಟ್ಟುಕೊಟ್ಟಿದ್ದರು. ನಂತರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಬಳಿಕ ಮಹಾಲಕ್ಷ್ಮಿ ಗಂಡನನ್ನು ತೊರೆದು ಬೆಂಗಳೂರು ನಗರದಲ್ಲಿ ವಾಸವಿದ್ದಳು. ಇದನ್ನೂ ಓದಿ: ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್
ದೇಹದ ತುಂಡುಗಳಿಂದ ಹಂತ ಹಂತವಾಗಿ ರಕ್ತ ಫ್ರಿಜ್‌ನಿಂದ ತೊಟ್ಟಿಕ್ಕಿದೆ. ಬಳಿಕ ರಕ್ತ ತೊಟ್ಟಿಕ್ಕಿ ಗೊಬ್ಬರ ಮಾದರಿ ಆಗಿ ಹುಳ ಆಗಿದೆ. ಸದ್ಯ ಪೊಲೀಸರು ಹಾಗು ಎಫ್‌ಎಸ್‌ಎಲ್ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಸಿಕ್ಕಿರುವ ಎಫ್‌ಎಸ್‌ಎಲ್ ಫ್ರೀಜರ್‌ನಿಂದ ದೇಹದ ಪೀಸ್‌ಗಳನ್ನು ಹೊರ ತೆಗೆದು ಎಲ್ಲಾ ಆಯಾಮದಲ್ಲಿ ಸ್ಯಾಂಪಲ್ಸ್ ಕಲೆಹಾಕಿದ್ದಾರೆ. ಮಹಾಲಕ್ಷ್ಮಿ ಜೊತೆ ಓರ್ವ ಯುವಕ ನಿರಂತರ ಸಂಪರ್ಕದಲ್ಲಿದ್ದು, ಪಿಕಪ್ ಡ್ರಾಪ್ ಕೊಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೀಗಾಗಿ ಆತನ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದೆಹಲಿಯ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಪ್ರಮಾಣವಚನ ಸ್ವೀಕಾರ