ಕೋಲಾರ: ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗ ಥಳಿಸಿ ಕಾರಿನಲ್ಲಿ ಅಪಹರಣ ಆರೋಪ ಇದೀಗ ಕೇಳಿ ಬಂದಿದೆ. ಕೋಲಾರ ತಾಲೂಕಿನ ಸೋಮಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಸುಮಾರು 5 ಜನ ಮಹಿಳೆಯರ ತಂಡ ಮಹಿಳೆಯೋರ್ವಳನ್ನ ಹಿಗ್ಗಾಮುಗ್ಗ ಥಳಿಸಿ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.
33 ವರ್ಷದ ಕಮಲಮ್ಮ ಅಪಹರಣಕ್ಕೊಳಗಾದ ಮಹಿಳೆ ಎನ್ನಲಾಗುತ್ತಿದೆ. ಅಪಹರಣಕ್ಕೂ ಮೊದಲು ಹಲ್ಲೆ ಮಾಡಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಹಿಳೆಯನ್ನು ಎಳೆದಾಡಿ ದೊಣ್ಣೆಗಳಿಂದ ಹೊಡೆದು ಕಾರಿನಲ್ಲಿ ಕರೆದೊಯ್ದ ದುಷ್ರ್ಕಮಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ.
ಮೀನಾಕ್ಷಿ, ಶಾಲಿನಿ ಎಂಬವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ನಡೆದಿರುವ ಕೃತ್ಯ ಎನ್ನಲಾಗಿದೆ. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಹೀಗೆ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 15 ಸಾವಿರ ರೂ., ದಾಖಲಾತಿಗಳಿದ್ದ ಪರ್ಸ್ ಹಿಂದಿರುಗಿಸಿದ ಕಾಲೇಜಿನ ವಿದ್ಯಾರ್ಥಿಗಳು
ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್