– ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದ ಮಹಿಳೆ
ಬೆಂಗಳೂರು: ಇಂದು ಮಧ್ಯಾಹ್ನ 12 ಘಂಟೆ ಸುಮಾರಿಗೆ ಕುರುಬರಹಳ್ಳಿಯ ಮಹಿಳೆಯೊಬ್ಬರು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ (Rajajinagar Metro Station) ನಿಂತಿದ್ದಾಗ ತಲೆ ಸುತ್ತಿ ಹಳಿಗೆ ಬಿದ್ದ ಘಟನೆ ನಡೆದಿದೆ.
ತಲೆ ಸುತ್ತು ಬಂದು ರೈಲ್ವೆ ಹಳಿಗೆ ಬಿದ್ದ 50 ವರ್ಷದ ಲೀಲಾವತಿ ಅವರನ್ನ ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಹಿಳೆ ಪ್ರಣಾಪಾಯದಿಂದ ಪಾರಾಗಿದ್ದು, ನಾನು ಆತ್ಮಹತ್ಯೆಗೆ (Suicide) ಯತ್ನಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಬೆರಸಿಕೊಟ್ಟು ಅತ್ಯಾಚಾರ: ಡಿಸಿಪಿ ಅನಿತಾ ಹದ್ದಣವರ್ ಮಾಹಿತಿ

ಹೂವಿನ ವ್ಯಾಪಾರ ಮಾಡುವ ಲೀಲಾವತಿ 12 ಘಂಟೆ ಸುಮಾರಿಗೆ ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಪತಿ ಜೊತೆ ಬಂದಿದ್ರು. ಫ್ಲಾಟ್ ಫಾರಂ ಸಮೀಪ ನಿಂತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಕಣ್ಣು ಮಬ್ಬಾಗಿ ಹಳಿಗೆ ಬಿದ್ದಿದ್ದಾರೆ. ಈ ವೇಳೆ ಹಳಿಗೆ ಪೂರೈಕೆ ಆಗ್ತಿದ್ದ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಯ್ತು. ಇದರಿಂದ ಕೆಲ ನಿಮಿಷಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಯ್ತು.
ಆರಂಭದಲ್ಲಿ ಆತ್ಮಹತ್ಯೆಗೆ ಯತ್ನಿಸಲಾಗಿದೆ ಅಂತ ಹೇಳಲಾಗಿತ್ತು. ಸುಬ್ರಹ್ಮಣ್ಯನಗರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ, ತಲೆ ಸುತ್ತಿನಿಂದ ಬಿದ್ದಿರೋದರ ಬಗ್ಗೆ ಮಹಿಳೆ ಹೇಳಿಕೆ ನೀಡಿದ್ದಾರೆ. ಸದ್ಯ ಆರೋಗ್ಯವಾಗಿರುವ ಮಹಿಳೆಯನ್ನ ಪೊಲೀಸರು ಕೆಲ ಮಾಹಿತಿ ಪಡೆದು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಆಗ್ತಾ ಇರೋದು ವಾಹನಗಳ ಬ್ರೇಕ್ ಡೌನ್‌ನಿಂದ: ಪ್ರಿಯಾಂಕ್ ಖರ್ಗೆ
