ಶ್ರೀನಗರ: ಜಮ್ಮುವಿನ (Jammu) ಶ್ರೀನಗರ ಹೆದ್ದಾರಿಯಲ್ಲಿ (Srinagar National Highway) ಗುಡ್ಡದ ಮೇಲಿನ ದೊಡ್ಡ ಕಲ್ಲುಗಳು ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಮಧ್ಯೆ 22 ವರ್ಷದ ಗರ್ಭಿಣಿ ಮಹಿಳೆಯೊಬ್ಬರು (Women) ಅಂಬುಲೆನ್ಸ್‌ನಲ್ಲಿಯೇ (Ambulance) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Advertisement
ಗೂಲ್‍ನಲ್ಲಿರುವ (Gool) ಧರಮ್-ಸಂಗಲ್ದನ್ (Dharam-Sangaldan) ನಿವಾಸಿ ಶಹೀನಾ, ರಾಂಬನ್‍ನಲ್ಲಿರುವ (Ramban district) ಜಿಲ್ಲಾ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್‍ನಲ್ಲಿ (Traffic jam) ಸಿಲುಕಿಕೊಂಡಿದ್ದರು. ಈ ವೇಳೆ ತೀವ್ರ ಹೆರಿಗೆ ನೋವಿನಿಂದ ಅಂಬುಲೆನ್ಸ್ ಸಹಾಯಕ ಸಿಬ್ಬಂದಿ ಸಹಾಯದಿಂದ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ‘ಚಕ್ಡಾ ಎಕ್ಸ್ ಪ್ರೆಸ್’ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ
Advertisement
Advertisement
ಹೆದ್ದಾರಿಯ ಮೇಲಿರುವ ಗುಡ್ಡದ ಮೇಲಿದ್ದ ಕಲ್ಲುಗಳು ರಸ್ತೆ ಮೇಲೆ ಜಾರಿ ಬಿದ್ದಿದ್ದರಿಂದ ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಲ್ಲು ಮೇಲಿನಿಂದ ಕೆಳಗುರುಳಿದ್ದರಿಂದ ಈ ವೇಳೆ ಅನೇಕ ವಾಹನಗಳಿಗೆ ಹಾನಿ ಕೂಡ ಆಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ
Advertisement
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಶಾಹೀನಾ ತಂದೆ ಮೊಹಮ್ಮದ್ ಯೂಸುಫ್ ಅವರು, ನಾವು ರಾಂಬನ್‍ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಗೂಲ್‍ನಿಂದ ಕರೋಲ್‍ಗೆ ತಲುಪಿದಾಗ ಬಹಳ ಟ್ರಾಫಿಕ್ ಇತ್ತು. ಆದರೆ ಸೇನಾ ಸಿಬ್ಬಂದಿ ಅಂಬುಲೆನ್ಸ್ ತೆರಳಲು ದಾರಿ ಮಾಡಿಕೊಟ್ಟರು. ಹೀಗಿದ್ದರೂ ಗುಡ್ಡದ ಮೇಲಿದ್ದ ಕಲ್ಲುಗಳು ಮೆಹರ್ ಬಳಿ ರಸ್ತೆಯಲ್ಲಿ ಬಿದ್ದಿದ್ದರಿಂದ ಆಸ್ಪತ್ರೆಗೆ ತೆರಳಲು ಸಾಧ್ಯವಾಗಲಿಲ್ಲ. ಕೊನೆಗೆ ಮಾರ್ಗ ಮಧ್ಯೆ ಅಂಬುಲೆನ್ಸ್‌ನಲ್ಲಿಯೇ ನನ್ನ ಮಗಳು ಮಗುವಿಗೆ ಜನ್ಮ ನೀಡಿದಳು. ಹೆರಿಗೆ ಬಳಿಕ ಶಹೀನಾ ಮತ್ತು ಆಕೆಯ ನವಜಾತ ಶಿಶು ಇಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ವೈದ್ಯಕೀಯ ಸಿಬ್ಬಂದಿ, ಸೇನಾ ಸಿಬ್ಬಂದಿ, ಪೊಲೀಸರು ಮತ್ತು ನಾಗರಿಕ ಸ್ವಯಂಸೇವಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸದ್ಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಶಹೀನಾ ಅವರೊಂದಿಗೆ ಬಂದ ನರ್ಸಿಂಗ್ ಸಿಬ್ಬಂದಿ ಹೇಳಿದ್ದಾರೆ.