ತುಮಕೂರು: ವರ್ಕ್ ಫ್ರಮ್ ಹೋಂ (Work From Home) ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಖದೀಮರು 14.15 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಮನೆಯಲ್ಲಿದ್ದು ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ (Sira) ಪಟ್ಟಣದ ಜ್ಯೋತಿ ನಗರದ ಬಿ.ವೀಣಾ ಎಂಬುವರು 14.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!
ಆರೋಪಿಗಳು ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿ ‘ವರ್ಕ್ ಫ್ರಮ್ ಹೋಂ’ ಬಗ್ಗೆ ವಿವರಿಸಿದ್ದಾರೆ. ನಂತರ ಲಿಂಕ್‌ವೊಂದನ್ನು ಕಳುಹಿಸಿ ಅದರಲ್ಲಿ ಲಾಗಿನ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಇದಾದ ಬಳಿಕ ವೀಣಾ ಮತ್ತು ಅವರ ಪತಿಯ ಬ್ಯಾಂಕ್ ಖಾತೆಯ ವಿವರ ಪಡೆದು, ಪತಿಯ ಖಾತೆಗೆ ಬೋನಸ್ ಎಂದು 800 ರೂ. ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಆರ್‌ಬಿಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
ನಂತರ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದರೆ ಜಾಸ್ತಿ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ವೀಣಾ ನ.11ರಿಂದ 27ರವರೆಗೆ ಹಂತ ಹಂತವಾಗಿ ಒಟ್ಟು 14.15 ಲಕ್ಷ ಹಣ ವರ್ಗಾಯಿಸಿದ್ದಾರೆ. ಹೂಡಿಕೆ ದುಡ್ಡು ವಾಪಸ್ ಕೇಳಿದಾಗ ಇನ್ನೂ 18 ಲಕ್ಷ ರೂ. ಕಟ್ಟಿದರೆ ಮಾತ್ರ ಹಣ ಮರಳಿಸುತ್ತೇವೆ ಎಂದಿದ್ದಾರೆ. ಇದೀಗ ವಂಚನೆಗೊಳಗಾಗಿ ಕಳೆದುಕೊಂಡಿರುವ ಹಣ ವಾಪಸ್ ಕೊಡಿಸುವಂತೆ ವೀಣಾ ಸೈಬರ್ ಠಾಣೆಯ ಮೊರೆ ಹೋಗಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!