ಬೆಳಗಾವಿ: ಮಗಳ ಹೊಟ್ಟೆಗೆ ಹೊಡೆದು ಹತ್ಯೆ ಮಾಡಿದ್ದ ಮಲತಾಯಿಯನ್ನು 8 ತಿಂಗಳ ಬಳಿಕ ಬೆಳಗಾವಿ (Belagavi) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಪ್ನಾ ನಾವಿ ಎಂದು ಗುರುತಿಸಲಾಗಿದೆ. ಆರೋಪಿ, 4 ವರ್ಷದ ಮಗಳ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ತಾನೇನೂ ಮಾಡಿಲ್ಲ ಎಂಬಂತೆ ಇದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕ್ರೌರ್ಯ ಬೆಳಕಿಗೆ ಬಂದಿದ್ದು, ಮಲತಾಯಿಯ ಅಸಲಿ ಬಣ್ಣ ಬಯಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್, ಟ್ರ‍್ಯಾಕ್ಟರ್ ಡಿಕ್ಕಿ – ಓರ್ವ ಯುವತಿ ಸಾವು, 18 ಜನರಿಗೆ ಗಾಯ
Advertisement
2024ರ ಮೇ ತಿಂಗಳಲ್ಲಿ ಸಮೃದ್ಧಿ ರಾಯಣ್ಣ ನಾವಿ (4) ಸಾವನ್ನಪ್ಪಿದ್ದಳು. ಮಗುವಿನ ಅಜ್ಜ ಹಾಗೂ ಅಜ್ಜಿ ಸಪ್ನಾ ನಾವಿ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಬಳಿಕ ಮೃತಪಟ್ಟ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದಾದ ಬೆನ್ನಲ್ಲೇ ಸಪ್ನಾ ನಾವಿ ನಿರೀಕ್ಷಣಾ ಜಾಮೀನು ಪಡೆದಿದ್ದಳು.
Advertisement
Advertisement
ಸದ್ಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ಹೊಟ್ಟೆಗೆ ಹೊಡೆದು, ಅಥವಾ ಒದ್ದು ಗಾಯಗೊಳಿಸಿ ಕೊಲೆ ಎಂದು ಸಾಬೀತಾಗಿದೆ. ಈ ಹಿನ್ನೆಲೆ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ರದ್ದಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಣ್ಣ, ಸಮೃದ್ಧಿ ಹೆತ್ತ ತಾಯಿ ಸಾವಿನ ನಂತರ ಎರಡನೇ ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಆರು ಮಂದಿಗೆ ಗಂಭೀರ ಗಾಯ