-ಪುಟ್ಟ ಮಗುವಿನಂತೆ ನೋಡಿಕೊಳ್ತಿದ್ರು
ಬೆಂಗಳೂರು: ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ಪುಟ್ಟ ಮಗುವಿನ ರೀತಿ ಕಾರನ್ನು ನೋಡಿಕೊಂಡಿದ್ವಿ, ಈಗ ತುಂಬಾ ನೋವಾಗುತ್ತಿದೆ ಎಂದು ಏರೋ ಇಂಡಿಯಾ ಶೋನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕಾರ್ ಕಳೆದುಕೊಂಡ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾರು ಕಳೆದುಕೊಂಡ ಅರ್ಚನಾ ಅವರು, ಟಿಕೆಟ್ ಎಲ್ಲ ಕ್ಲಿಯರ್ ಮಾಡಿಕೊಂಡು ಒಳಗೆ ಹೋಗಿದ್ದೆವೆ. ಆದರೆ ಐದು ನಿಮಿಷಗಳಲ್ಲಿಯೇ ಅಲ್ಲಿಂದ ಹೊಗೆ ಬರುತ್ತಿತ್ತು. ಏರ್ ಶೋ ನಡೆಯುತ್ತಿದ್ದ ಜಾಗದಿಂದ ಪಾಕ್ ಪಾರ್ಕಿಂಗ್ ಮಾಡಿದ್ದ ಜಾಗಕ್ಕೂ ಸುಮಾರು 2-3 ಕಿ.ಮೀ ದೂರವಿತ್ತು. ಹೀಗಾಗಿ ನಮಗೆ ಏನಾಯ್ತು ಎಂದು ಗೊತ್ತಾಗಿಲ್ಲ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಸ್ವಲ್ಪ ಸಮಯದ ನಂತರ ನನ್ನ ಸಹೋದರಿ ಫೋನ್ ಮಾಡಿ ಮಾಧ್ಯಮಗಳಲ್ಲಿ ಅಗ್ನಿ ಅವಘಡ ಆಗಿದೆ ಎಂದು ಸುದ್ದಿ ಬರುತ್ತಿದೆ ಅಂತ ಹೇಳಿದ್ದಳು. ತಕ್ಷಣ ನಾವು ಬಂದು ನೋಡಿದಾಗ ಸಾಲು ಸಾಲು ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಯಾವ ಕಾರು ಎಂದು ಕಂಡು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಎಲ್ಲವೂ ಸುಟ್ಟು ಹೋಗಿವೆ. ಸ್ವಲ್ಪ ಸ್ವಲ್ಪ ಮಾರ್ಕ್ ನೋಡಿಕೊಂಡು ನಮ್ಮ ಕಾರನ್ನು ಹುಡುಕಬೇಕು. ಆದರೆ ಕಾರ್ ನೋಡಿದರೆ ದುಃಖವಾಗಿದೆ. ಎಲ್ಲರಿಗೂ ಇದೊಂದು ದೊಡ್ಡ ಆಘಾತವಾಗಿದೆ. ಆದರೆ ಜನಕ್ಕೆ ಏನು ಆಗದಿದ್ದರೆ ಸಾಕು, ಪೊಲೀಸರು ಮತ್ತು ಇಲ್ಲಿನ ಜನರು ಸಹಾಯ ಮಾಡುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ.
ಇದೆಲ್ಲಾ 5-10 ನಿಮಿಷದಲ್ಲಿ ಆಗಿದೆ. ನಮ್ಮ ಕಾರು ಐ-20 ಆಗಿದ್ದು, ನನಗೆ ಇತ್ತೀಚೆಗೆ ಮದುವೆಯಾಗಿದೆ. ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ನಮ್ಮ ಮನೆಯವರು ಮೂರು ವರ್ಷಗಳ ಹಿಂದೆ ಕಾರ್ ತೆಗೆದುಕೊಂಡಿದ್ದು, ಕಾರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ನಮ್ಮ ಮನೆಯವರಲ್ಲಿ ಒಬ್ಬರಂತೆ ಕಾರಿನ ಮೇಲೆ ತುಂಬಾ ಅಫೆಕ್ಷನ್ ಇತ್ತು. ಆದರೆ ಇಂದು ಈ ರೀತಿ ಆಗಿದೆ ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ನಮ್ಮ ಮನೆಯವರು ಮದುವೆಯಾಗಿಂದ ಅದನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಕಾರ್ ಎಂದರೆ ತುಂಬಾ ಪ್ರೀತಿ ಇದೆ. ನನ್ನಿಂದ ಅವರಿಗೂ ತುಂಬಾ ನೋವಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಅವಘಡ ಏರೋ ಇಂಡಿಯಾದಲ್ಲಿ ಆಗಿದೆ. ಆದರೆ ಈ ಅವಘಡದಿಂದ ಯಾರಿಗೂ ತೊಂದರೆ ಆಗಬಾದರು. ಎಲ್ಲರೂ ಸಣ್ಣ ಸಣ್ಣ ಸೇವಿಂಗ್ಸ್ ಇಟ್ಟುಕೊಂಡು ಕಾರ್ ತೆಗೆದುಕೊಂಡಿರುತ್ತಾರೆ. ಈ ರೀತಿ ಆದರೆ ಮಧ್ಯಮ ವರ್ಗದ ನಮಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.
https://www.youtube.com/watch?v=NCs_XVL0SKE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv