Connect with us

Latest

ದೇಶದ ಇತಿಹಾಸದಲ್ಲೇ ಫಸ್ಟ್ ಟೈಂ- ಸಬರ್ ಮತಿ ನದಿಯಿಂದ ಸೀ ಪ್ಲೇನ್ ಮೂಲಕ ಹೊರಟ ಮೋದಿ

Published

on

ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಪ್ರಚಾರ ಕಣ ರಂಗೇರಿದೆ. ರೊಡ್‍ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ನೂತನ ಅಸ್ತ್ರ ಪ್ರಯೋಗಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೀ ಪ್ಲೇನ್ ಬಳಸಲಾಗಿದೆ. ಸೀ ಪ್ಲೇನ್ ಮೂಲಕ ಸಬರ್‍ಮತಿ ನದಿಯಿಂದ 180 ಕಿ.ಮೀ ದೂರದಲ್ಲಿರುವ ಧಾರೋಯ್ ಡ್ಯಾಮ್‍ಗೆ ಮೋದಿ ತೆರಳಿದ್ದಾರೆ.

ನದಿಯಿಂದ ವಿಮಾನ ಟೇಕ್ ಆಫ್ ಆಗಿದ್ದು, ಅಂಬಾಜಿ ಮಾತೆ ದೇಗುಲಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮತ್ತೆ ಅದೇ ಮಾರ್ಗವಾಗಿ ಅಹಮದಾಬಾದ್‍ಗೆ ಹಿಂದಿರುಗಲಿದ್ದಾರೆ. ವಿಶೇಷ ಸೀ ಪ್ಲೇನ್ ಪ್ರಧಾನಿ ಮೋದಿಯನ್ನು ಹೊತ್ತು ನದಿಯ ಮೇಲೆ ತೇಲುತ್ತಾ ಸಾಗಿತು.

ಈ ಸಣ್ಣ ವಿಮಾನ 9 ರಿಂದ 15 ಜನರನ್ನ ಹೊತ್ತೊಯ್ಯಬಹುದಾದ ಸಾಮಥ್ರ್ಯ ಹೊಂದಿದೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್‍ಗಾಗಿ ಈ ವಿಮಾನಕ್ಕೆ ಕೇವಲ 300 ಮೀಟರ್‍ನಷ್ಟು ಉದ್ದದ ರನ್‍ವೇ ಇದ್ದರೆ ಸಾಕು. ಈ ವಿಮಾನದಲ್ಲಿ ಫ್ಲೋಟ್‍ಗಳು ಇದ್ದು ನೀರಿನ ಮೇಲೆ ಲ್ಯಾಂಡ್ ಆಗಲು ನೆರವಾಗುತ್ತದೆ.

ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿರಾಜು ಇನ್ನಿತರ ಅಧಿಕಾರಿಗಳೊಂದಿಗೆ ಸೇರಿ ವಿಮಾನದ ಪ್ರಾತ್ಯಕ್ಷಿಕೆ ನಡೆಸಿದ್ದರು.

ಸೋಮವಾರವಷ್ಟೇ ಪ್ರಧಾನಿ ಮೋದಿ ಸೀ ಪ್ಲೇನ್‍ನಲ್ಲಿ ಪ್ರಯಾಣಿಸುವ ಬಗ್ಗೆ ಟ್ವೀಟ್ ಮಾಡಿದ್ದರು. ವಿಮಾನ, ರಸ್ತೆ ಮತ್ತು ರೈಲ್ವೆ ಸಂಪರ್ಕಗಳ ಜೊತೆ ನಮ್ಮ ಸರ್ಕಾರ ಜಲಮಾರ್ಗಗಳ ಬಳಕೆಗೆ ಶ್ರಮ ವಹಿಸುತ್ತಿದೆ. ಇದು 125 ಕೋಟಿ ಭಾರತೀಯರಿಗಾಗಿ ಎಂದು ಮೋದಿ ಟ್ವೀಟ್‍ನಲ್ಲಿ ಹೇಳಿದ್ದರು.

ಅಹಮದಾಬಾದ್‍ನಲ್ಲಿ ಇಂದು ನಡೆಯಬೇಕಿದ್ದ ಮೋದಿ ರೋಡ್ ಶೋಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸೀ ಪ್ಲೇನ್ ಮೂಲಕ ಮೋದಿ ಪ್ರಯಾಣಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಗಮನ ಸೆಳೆಯುವುದು ಉದ್ದೇಶವಾಗಿದೆ.

ಪ್ರಧಾನಿ ಮೋದಿ ಹಾಗೂ ನೂತನವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಇಂದು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದ್ದರು. ಅದ್ರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುಜರಾತ್ ಪೊಲೀಸ್ ರೋಡ್ ಶೋ ಗೆ ಅನುಮತಿ ನಿರಾಕರಿಸಿತ್ತು.

https://twitter.com/ANI/status/940463701030723590

Click to comment

Leave a Reply

Your email address will not be published. Required fields are marked *