ನವದೆಹಲಿ: ದೇಶದ ದೊಡ್ಡ ಐಟಿ ಕಂಪನಿಯ ಮಾಲೀಕ, ಶ್ರೀಮಂತ ಉದ್ಯಮಿ, ಅಜೀಂ ಪ್ರೇಮ್‍ಜಿ ವಿಪ್ರೋ ಕಂಪನಿಯಿಂದ ನಿವೃತ್ತರಾಗಲಿದ್ದಾರೆ.
ಜುಲೈ 31 ರಂದು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‍ಜಿ ಹೊರ ಬಂದರೂ ಮುಂದಿನ 5 ವರ್ಷದ ಅವಧಿಗೆ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಮುಂದುವರಿಯಲಿದ್ದಾರೆ.
Advertisement
ಅಜೀಂ ಪ್ರೇಮ್ ಜಿ ಪುತ್ರ ಮುಖ್ಯ ಕಾರ್ಯತಂತ್ರ ಅಧಿಕಾರಿ ಮತ್ತು ಮಂಡಳಿಯ ಸದಸ್ಯರಾದ ರಷೀದ್ ಪ್ರೇಮ್ ಜಿ ತಂದೆ ನಂತರ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Advertisement
ಹಾಲಿ ಸಿಇಒ ಅಬಿದಾಲಿ ನೀಮುಚ್‍ವಾಲಾ ಅವರನ್ನು ಎಂಡಿಯಾಗಿಯೂ ವಿಪ್ರೋ ಆಡಳಿತ ಮಂಡಳಿ ನೇಮಿಸಿದೆ. ಅಜೀಂ ಪ್ರೇಮ್‍ಜಿ ಅವರು 1960ರಲ್ಲಿ ಬೆಂಗಳೂರಿನಲ್ಲಿ ವಿಪ್ರೋ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
Advertisement
Advertisement
ದೀರ್ಘವಾದ ಮತ್ತು ಸಂತೃಪ್ತ ಪಯಾಣ ನನ್ನದಾಗಿತ್ತು. ಮುಂದೆ ಸಾಮಾಜ ಸೇವೆ ಹೆಚ್ಚಿನ ಗಮನ ಹರಿಸುತ್ತೇನೆ. ರಿಷದ್ ಅವರ ನಾಯಕತ್ವದಲ್ಲಿ ವಿಪ್ರೋ ಕಂಪನಿ ಮತ್ತಷ್ಟು ಬೆಳವಣಿಗೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಅಜೀಂ ಪ್ರೇಮ್‍ಜೀ ತಿಳಿಸಿದ್ದಾರೆ.