ಬೆಂಗಳೂರು: ವಿಪ್ರೋ (Wipro) ಮುಖ್ಯಸ್ಥ ಅಜೀಂ ಪ್ರೇಮ್‌ಜಿ (Azim Hashim Premji) ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಜೀಂ ಪ್ರೇಮ್‌ಜಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವಿಪ್ರೋ ಅಧ್ಯಕ್ಷರಾದ ರಿಷಾದ್ ಪ್ರೇಮ್‌ಜಿ (Rishad Premji) ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದ ನಂತರ ಅಜೀಂ ಪ್ರೇಮ್‌ಜಿ ಅವರು ಸಿಎಂ ಹಾಗೂ ಡಿಸಿಎಂ ಅವರನ್ನು ಮೊದಲ ಬಾರಿಗೆ ಸೌಜನ್ಯಯುತವಾಗಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ್
Advertisement
Advertisement
ಸದಾಶಿವನಗರದಲ್ಲಿರುವ (Sadashivanagara) ಡಿಕೆಶಿ ಅವರ ಮನೆಗೆ ಅಜೀಂ ಪ್ರೇಮ್‌ಜಿ ಭೇಟಿ ನೀಡಿದ ಸಂದರ್ಭ ಡಿಕೆಶಿ ತಮ್ಮ ನಿವಾಸದಿಂದ ಹೊರಬಂದು ಪ್ರೇಮ್‌ಜಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದನ್ನೂ ಓದಿ: ಜಮೀರ್ ಅಹಮ್ಮದ್ ಮುಂದೆ ಕಣ್ಣೀರು ಹಾಕಿದ ಗುಡಿಸಲು ವಾಸಿಗಳು
Advertisement
Advertisement
ಪ್ರೇಮ್‌ಜಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ವಿಪ್ರೋ ಸಂಸ್ಥೆ ದೇಶಕ್ಕೆ ಆಸ್ತಿ. ಈ ಸಂಸ್ಥೆ ಹಲವಾರು ಉದ್ಯೋಗ ಸೃಷ್ಟಿ ಮಾಡಿದೆ. ಈ ಮೂಲಕ ಸರ್ಕಾರದ ಹೊರೆ ಕಡಿಮೆ ಮಾಡಲು ಮುಂದಾಗಿದ್ದಾರೆ. ನಮ್ಮಿಂದ ಎಲ್ಲಾ ಸಹಕಾರ ಕೊಡಲಾಗುತ್ತಿದೆ. ನಾನು ಅವರಿಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದೇನೆ. ಗ್ರಾಮೀಣ ಶಿಕ್ಷಣದ ವಿಚಾರವಾಗಿ ಅವರು ಹಾಕಿಕೊಂಡಿರುವ ಯೋಜನೆಗಳಿಗೆ ನಮ್ಮ ಸಹಕಾರ ಇದೆ. ನಾವೆಲ್ಲಾ ಸೇರಿ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದರು. ಇದನ್ನೂ ಓದಿ: 4 ಸ್ಥಾನ ಬಿಟ್ಟುಕೊಡಲು ಅಮಿತ್ ಶಾ ಒಪ್ಪಿಗೆ- ಮೈತ್ರಿ ಖಚಿತತೆ ಬಗ್ಗೆ BSY ಸುಳಿವು
Web Stories