ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸ್ಯಾಂಡಲ್ವುಡ್ ಗ್ಲಾಮರ್ ಕೊಡಲು ಪ್ಲಾನ್ ಮಾಡಿದ್ದಾರೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಲರ್ಫುಲ್ ಆಗಲಿದೆ.
ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ.
Advertisement
Advertisement
ಈಗಾಗಲೇ ಪಕ್ಷದ ಪ್ರಚಾರದ ಹೊಣೆ ಹೊರಲು ಮಾಜಿ ಸಂಸದೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ನಟಿ ಭಾವನಾ ಪ್ರಚಾರದಲ್ಲಿ ಸಕ್ರಿಯವಾಗಿ ಇರುತ್ತಾರೆ. ಇವರ ಜೊತೆಗೆ ದರ್ಶನ್ ತಾಯಿ, ಇವರು ಈಗಾಗಲೇ ಮಹಿಳಾ ಕಾಂಗ್ರೆಸ್ ಘಟಕದಲ್ಲಿದ್ದಾರೆ. ಆದ್ದರಿಂದ ದರ್ಶನ್ ಸಿಎಂ ಕುಟುಂಬಕ್ಕೆ ಮನೆ ಮಗ ಇದ್ದಂತೆ. ಹಾಗಾಗಿ ತಾಯಿ ಜೊತೆಗೆ ದರ್ಶನ್ ಕೂಡ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ಹೇಳಲಾಗಿದೆ.
Advertisement
ಸೋಮವಾರ ಸುದೀಪ್ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ಸಿಎಂ ತಮ್ಮ ಹಾಗೂ ಮಗನ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಸುದೀಪ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.