– ಯೋಜನೆ ಸಹಕಾರಿಯಾದ್ರೆ ನೀರಿನ ಯುದ್ಧ ನಿಲ್ಲುತ್ತೆ
ಅಮರಾವತಿ: ಗೋದಾವರಿ-ಕಾವೇರಿ ಲಿಂಕ್ ಮಾಡಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರದ ನೀರಿನ ಸಮಸ್ಯೆ ನೀಗಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲೇ ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ 31ನೇ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪಾಲುದಾರಿಕೆ ಶೃಂಗಸಭೆ 2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳು ನೀರಿನ ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿಯುವ ಬದಲು ಮಾತುಕತೆ ಮತ್ತು ಸಹಕಾರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಗೋದಾವರಿ-ಕಾವೇರಿ ಲಿಂಕ್ ಮಾಡಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರದ ನೀರಿನ ಸಮಸ್ಯೆ ನೀಗಿಸುತ್ತೇವೆ ಎಂದಿದ್ದಾರೆ.ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ಯಾವುದೇ ದಾಖಲೆಗಳಿಲ್ಲ – ಹಿಂದೂಗಳು ನಾಪತ್ತೆ ಎಂಬ ಯೋಗಿ ಹೇಳಿಕೆಗೆ ಯುಪಿ ಸಿಇಒ ಕೌಂಟರ್
ಗೋದಾವರಿ-ಕಾವೇರಿ ನದಿ ಜೋಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ನಡುವಿನ ಜಲಸಂಬಂಧಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ನಾವೆಲ್ಲರೂ ಮೊದಲು ಭಾರತೀಯರು ಎಂಬ ಮನೋಭಾವನೆಯೊಂದಿಗೆ ರಾಜ್ಯಗಳು ಸಾಮರಸ್ಯದಿಂದ ಮುಂದುವರಿಯಬೇಕು ಎಂದು ಕರೆ ನೀಡಿದರು. ನೀರಿನ ಲಭ್ಯತೆ ಮತ್ತು ಹಂಚಿಕೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ವಿವಾದಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ನದಿ ಜೋಡಣೆಯ ಮೂಲಕ ಜಲಸಂಪನ್ಮೂಲದ ಸಮರ್ಪಕ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂಬ ಅಭಿಪ್ರಾಯವನ್ನು ಚಂದ್ರಬಾಬು ನಾಯ್ಡು ಮುಂದಿಟ್ಟಿದ್ದಾರೆ.
ಸಿಐಐ ಶೃಂಗಸಭೆಯಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಆಂಧ್ರಪ್ರದೇಶಕ್ಕೆ 303 ಯೋಜನೆಗಳ ಮೂಲಕ 9.89 ಲಕ್ಷ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವನೆಗಳು ಬಂದಿರುವುದಾಗಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು.ಇದನ್ನೂ ಓದಿ: ʻತಂದೆಯ ತೊಡೆ ಮೇಲೆ ತಾಯಿ ಕುಳಿತಿರುತ್ತಿದ್ದರುʼ ಹೇಳಿಕೆಗೆ ಬಿಜೆಪಿ ವ್ಯಂಗ್ಯ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು
