ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?

Public TV
2 Min Read
HDKumaraswamy

ಬೆಂಗಳೂರು: ಬಿಜೆಪಿ (BJP) ಹಾಗೂ ಜೆಡಿಎಸ್ (JDS) ದೋಸ್ತಿಗೆ ಸಮಯ ಕೂಡಿ ಬರುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಮೋದಿ ಜೊತೆಗಿನ ಗುಟ್ಟು ರಟ್ಟು ಮಾಡಿ ದೋಸ್ತಿಗೆ ಅಡಿಪಾಯ ಹಾಕಿದ್ರಾ ಕುಮಾರಸ್ವಾಮಿ (HD Kumaraswamy) ಅನ್ನೋ ಕುತೂಹಲವೊಂದು ರಾಜ್ಯರಾಜಕೀಯದಲ್ಲಿ ಹುಟ್ಟಿಕೊಂಡಿದೆ.

ಮಂಗಳವಾರ ನಡೆಯುವ ಎನ್‍ಡಿಎ (NDA Meeting) ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರ ಜೊತೆ ಚರ್ಚೆ ಬಳಿಕವೇ ದೋಸ್ತಿ ಡೀಲ್ ಫೈನಲ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.

MODI HDD

ಬಿಜೆಪಿ-ಜೆಡಿಎಸ್ ಡೀಲ್?: ಬಿಜೆಪಿ ಜೆಡಿಎಸ್ ದೋಸ್ತಿ ಮಾತುಕತೆ ಫೈನಲ್ ಆದ್ರೆ ಚುನಾವಣೆ ಪೂರ್ವ ಅಥವಾ ಚುನಾವಣೆ ನಂತರ ಮೈತ್ರಿ ಆಗಬಹುದು. ಚುನಾವಣೆ ಪೂರ್ವ ಮೈತ್ರಿಯಾದರೆ 28 ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾತುಕತೆ ಆಗಬಹುದು. 28 ಕ್ಷೇತ್ರಗಳಲ್ಲಿ 23+5 ಸೀಟು ಅಥವಾ 20+8 ಸೀಟು ಹೊಂದಾಣಿಕೆ ಸೂತ್ರ ಆಗಬಹುದು. ದೋಸ್ತಿ ಮಾತುಕತೆ ಫೈನಲ್ ಆದರೆ ಕುಮಾರಸ್ವಾಮಿಗೆ ಕೇಂದ್ರದಲ್ಲಿ ಸ್ಥಾನಮಾನಗಳು ಸಿಗಬಹುದು. ಸೀಟು ಹಂಚಿಕೆ ಸೂತ್ರ ಯಶಸ್ವಿಯಾದರೆ ವಿಪಕ್ಷ ಸ್ಥಾನ ಕೊಡುವ ಬಗ್ಗೆಯೂ ಚರ್ಚೆಗಳು ಆಗಬಹುದು ಎನ್ನಲಾಗಿದೆ.

ಮೈತ್ರಿಗೆ ಒಪ್ತರಾ ದೇವೇಗೌಡರು?: ಜಾತ್ಯಾತೀತ ನಿಲುವ ಹೊಂದಿರೋ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರ (HD Devegowda) ಒಪ್ಪಿಗೆಯೇ ಈಗ ಸವಾಲಾಗಿದೆ. ಮಗ ಒಪ್ಪಿದರೂ ಬಿಜೆಪಿ ಜೊತೆ ದೋಸ್ತಿಗೆ ಅಪ್ಪ ಒಪ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಜಾತ್ಯಾತೀತ ನಿಲುವು ಹೊಂದಿರೋ ದೇವೇಗೌಡರನ್ನ ಒಪ್ಪಿಸೋದೇ ದೊಡ್ಡ ಟಾಸ್ಕ್ ಆಗಿದೆ. ಕುಮಾರಸ್ವಾಮಿ ಮಾತಿಗೆ ದೇವೇಗೌಡರು ಒಪ್ಪದೇ ಹೋದ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಖಾಡಕ್ಕೆ ಇಳೀತಾರ ಎಂಬ ಕುತೂಹಲ ಕೂಡ ಹಿಟ್ಟಿದೆ. ಯಾಕೆಂದರೆ ದೇವೇಗೌಡರ ಜೊತೆ ಮೋದಿಯವರು ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದಾರೆ. ಹೀಗಾಗಿ ಮೋದಿ ಮಾತುಕತೆ ನಡೆದಿದ್ರೆ ಮನಸು ಬದಲಾಯಿಸಿ ಕಂಡಿಷನ್ ಹಾಕಿ ದೋಸ್ತಿಗೆ ಒಪ್ಪಿಗೆ ಕೊಡ್ತಾರಾ ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Web Stories

Share This Article