ಕೋಲ್ಕತ್ತಾ: ಬಿಜೆಪಿ ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತದೆಯೇ? ಎಂದು ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಜಿಎಸ್‍ಟಿ ಏರಿಕೆ ವಿರುದ್ಧ ಕಿಡಿಕಾರಿದರು.
ಕೋಲ್ಕತ್ತಾದಲ್ಲಿ ಶಹೀದ್ ದಿವಸ್(ಹುತಾತ್ಮರ ದಿನ) ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದ್ದು, ಕಡ್ಲೆಪುರಿಗೂ ಜಿಎಸ್‍ಟಿ ಬಂದಿದೆ. ಬಿಜೆಪಿ ಸ್ನೇಹಿತರು ಈಗ ಕಡ್ಲೆಪುರಿಯನ್ನು ತಿನ್ನುವುದಿಲ್ಲ. ಕಡ್ಲೆಪುರಿ, ಸಿಹಿತಿಂಡಿಗಳು, ಲಸ್ಸಿ, ಮೊಸರು ಮತ್ತು ಬೇವಿನ ಸೊಪ್ಪಿನ ಮೇಲೆ ಎಷ್ಟು ಜಿಎಸ್‍ಟಿ ವಿಧಿಸಲಾಗಿದೆ? ನಾವು ಏನು ತಿನ್ನುತ್ತೇವೆ? ಹೇಗೆ ತಿನ್ನಬೇಕು? ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ
Advertisement
ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದರಿಂದಲೂ ಜಿಎಸ್‍ಟಿಯನ್ನು ವಿಧಿಸಲಾಗಿದೆ. ಈ ವಿಧಾನ ನಮಗೆ ಬೇಡ. ಅದಕ್ಕೆ ನಮ್ಮ ಬಳಿ ತೆಗೆದುಕೊಂಡ ಎಲ್ಲವನ್ನು ಹಿಂತಿರುಗಿಸಿ. ಇಲ್ಲವಾದರೆ ನೀವು ಹೊರಟು ಹೋಗಿ ಎಂದು ಬಿಜೆಪಿ ವಿರುದ್ಧ ತಿರುಗೇಟು ಕೊಟ್ಟರು.
Advertisement
ಕಳೆದ ವರ್ಷ, ಛತ್ತೀಸ್‍ಗಢದ ಬಿಜೆಪಿ ಶಾಸಕ ಬ್ರಿಜ್‍ಮೋಹನ್ ಅಗರ್ವಾಲ್ ಅವರು ಸರಕುಗಳ ಬೆಲೆ ಏರಿಕೆಯನ್ನು ಸಮಸ್ಯೆ ಎಂದು ಭಾವಿಸುವವರು ತಿನ್ನುವುದನ್ನು ನಿಲ್ಲಿಸಬೇಕು ಎಂದು ವಿಚಿತ್ರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ರೋಶಗೊಂಡ ಜನರು, ನಾವು ಸತ್ತರೆ ಎಷ್ಟು ಜಿಎಸ್‍ಟಿ ಅನ್ವಯವಾಗುತ್ತೆ? ಮೃತದೇಹವನ್ನು ಸಾಗಿಸಲು ಹಾಸಿಗೆಗೆ ಎಷ್ಟು ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ
Advertisement
Advertisement
1993 ರ ಯೂತ್ ಕಾಂಗ್ರೆಸ್‍ನ ರ‍್ಯಾಲಿಯಲ್ಲಿ ಪೊಲೀಸರ ಗುಂಡಿನ ದಾಳಿಗೆ 13 ಜನರು ಸಾವನ್ನಪ್ಪಿದ್ದರು. ಅವರ ನೆನಪಿಗಾಗಿ ಟಿಎಂಸಿ ಪ್ರತಿ ವರ್ಷ ಜುಲೈ 21 ರಂದು ಹುತಾತ್ಮರ ದಿನವನ್ನು ಆಚರಿಸುತ್ತದೆ. ಈ ವೇಳೆ ಮಮತಾ ಬ್ಯಾನರ್ಜಿ ಅವರು ನಾಯಕಿಯಾಗಿದ್ದರು.