Bengaluru CityDistrictsKarnatakaLatestMain Post

ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

- ನಕಲಿ ಗಾಂಧಿ ಕುಟುಂಬದಿಂದ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಇಂದು ಸಹ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದೆ.

ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರೂ, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.

ರಮೇಶ್ ಕುಮಾರ್ ವೀಡಿಯೋವನ್ನು ಅಪ್ಲೋಡ್ ಮಾಡಿದ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ?
ಕಾನೂನನ್ನು ಕಾಲಕಸ ಮಾಡಿಕೊಂಡಿರುವ ಕಾಂಗ್ರೆಸ್‍ಗೆ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಕಂಡು ಕೆಂಡದ ಮೇಲೆ ಕೂತಂತಾಗಿದೆ. ಈ ಎಡಬಿಡಂಗಿಗಳು ‘ಮೇಟಿ ಪ್ರಕರಣ’ದಲ್ಲಿ ಎಫ್‍ಐಆರ್ ಕೂಡ ಹಾಕದೆ ಬಿ-ರಿಫೋರ್ಟ್ ಕೊಟ್ಟಿದ್ದರು. ಈ ಜಾಣಮರೆವು ನಾಚಿಕೆಗೇಡಲ್ಲದೇ ಬೇರೇನು? ಬಿಜೆಪಿ ಎಂದಿಗೂ ಕಾನೂನಿಗೆ ಬೆಲೆ ಕೊಡುತ್ತದೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ 

3, 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಅವರ ಋಣ ಸಂದಾಯ ಮಾಡಬೇಕಿದೆ! ನಕಲಿ ಗಾಂಧಿ ಕುಟುಂಬಕ್ಕಾಗಿ ಮಾಡಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಆಡಿದ ಮಾತುಗಳಿವು.

60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ, ಇಟೆಲಿಯಿಂದ ಬಂದವರಿಗೆ ಎಂತಹಾ ನಿಷ್ಠೆ? ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ. ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?

ಋಣ ಸಂದಾಯ ಎಂದರೆ ಏನು? ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ. ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.

ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ. ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ? ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

ರಾಜ್ಯ ಸರ್ಕಾರದ ಮೇಲೆ 40% ಆರೋಪ ಮಾಡುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಾಗ ಬೀದಿಗಿಳಿದಿದೆ. ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡವರು ಈಗ ಭ್ರಷ್ಟಾಚಾರದ ಬಗ್ಗೆ ಪ್ರವಚನ ಮಾಡುತ್ತಿರುವುದು ಹಾಸ್ಯಾಸ್ಪದವಲ್ಲವೇ?

ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜ ಬಣ್ಣ ಈಗ ಬಯಲಾಗಿದೆ. ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು. ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ? ಎಂದು ಕಿಡಿಕಾರಿದೆ.

Live Tv

Leave a Reply

Your email address will not be published.

Back to top button