ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

Public TV
2 Min Read
Koppala

– ರಾಡ್‌ನಿಂದ ಹೊಡೆದು, ಪೆಟ್ರೋಲ್‌ ಸುರಿದು ಸುಟ್ಟಿದ್ದ ಮುದ್ದಿನ ಹೆಂಡ್ತಿ
– ಮೂರು ಮಕ್ಕಳ ತಂದೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ

ಕೊಪ್ಪಳ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಬಳಿಕ ನಾಗರ ಪಂಚಮಿ ಹಬ್ಬ ಮಾಡಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ (Koppala) ತಾಲೂಕಿನ ಬುದಗೂಂಪದಲ್ಲಿ ನಡೆದಿದೆ.

ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ಪತಿ, ನೇತ್ರಾವತಿ (Netravati) ಚಟ್ಟಕಟ್ಟಿದ ಪತ್ನಿ. ತನ್ನ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

CRIME

ಕೊಲೆ ನಡೆದಿದ್ದು ಹೇಗೆ?
ಪತ್ನಿ ನೇತ್ರಾವತಿ ಜುಲೈ 25ರಂದು ಪ್ರೀಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ಗಂಡನನ್ನ ಕೊಲೆ ಮಾಡಿದ್ದಳು. ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ಶ್ಯಾಮಣ್ಣ ಜೊತೆ ಸೇರಿಕೊಂಡು ಪೆಟ್ರೋಲ್‌ ಸುರಿದು ಶವ ಸುಟ್ಟಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್- ವಿಕಾಸ್ ಕುಮಾರ್ ಸಸ್ಪೆಂಡ್ ಆದೇಶ ವಾಪಸ್

ಪರಸಂಗಕ್ಕೆ ಅಡ್ಡಿಯಾದ ಪತಿಗೆ ಚಟ್ಟ
ಆರೋಪಿ ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ. ಅದೇ ಗ್ರಾಮದ ನೇತ್ರಾವತಿಯನ್ನ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಭಂದ ಇತ್ತು. ಶ್ಯಾಮಣ್ಣನಿಗೆ ಮೂರು ಮಕ್ಕಳಿದ್ದರೂ ಇಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು. ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

ದ್ಯಾಮಣ್ಣನನ್ನ ಕೊಲೆ ಮಾಡಲೆಂದೇ ಬೂದಗುಂಪದ ಗ್ಯಾರೇಜ್ ಒಂದರಲ್ಲಿ ಶ್ಯಾಮಣ್ಣ ರಾಡ್ ಪಡೆದು ಅದೇ ರಾಡ್ ನಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಲಾರಿ ಚಕ್ರ ರಿಪೇರಿಗೆಂದು ರಾಡ್ ಪಡೆದುಕೊಂಡದಿದ್ದ ಶ್ಯಾಮಣ್ಣ, ಅದೇ ರಾಡ್ ನಿಂದ ದ್ಯಾಮಣ್ಣನನ್ನ ಕೊಂದಿದ್ದಾನೆ. ಕೊಲೆ ನಂತ್ರ ರಾಡ್ ವಾಪಸ್‌ ಕೊಟ್ಟಿದ್ದಾನೆ. ಜೊತೆಗೆ ಲಾರಿಗೆ ಪಂಚರ್‌ ಹಾಕಿಸಿಕೊಂಡು ಹಣ ಆಮೇಲೆ ಕೊಡ್ತೀನಿ ಎಂದು ಸಹಿ ಮಾಡಿ ಹೋಗಿದ್ದ, ಅಷ್ಟರಲ್ಲಿ ತಗಲ್ಲಾಕೊಂಡಿದ್ದಾನೆ.

ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿದ್ದ ಐನಾತಿ
ಜುಲೈ 25ರಂದು ಪತಿಯನ್ನ ಕೊಲೆ ಮಾಡಿದ್ದ ನೇತ್ರಾವತಿ 5 ದಿನಗಳ ಕಾಲ ಮನೆಯಲ್ಲೇ ಇದ್ದಳು. ಕೊಲೆ ನಂತರ ತನ್ನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಳು. ದ್ಯಾಮಣ್ಣನ ಮನೆಯವರು ಗಂಡನನ್ನ ಕೇಳಿದ್ರೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ನೇತ್ರಾವತಿ ಹಾಗೂ ಕೊಲೆ ಮಾಡಿದ ಪ್ರೀಯಕರ ಶ್ಯಾಮಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಇನ್ನೂ ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್ ಪೊಲೀಸರೇ ಶವ ಸಂಸ್ಕಾರ ಮಾಡಿದ್ರು. ಗುರುವಾರ (ಜು.31) ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಶವಕ್ಕೆ ಮಣ್ಣು ಹಾಕಿ ಶಾಸ್ತ್ರ ನೆರವೇರಿಸಿದ್ದಾರೆ. ದ್ಯಾಮಣ್ಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article