ಹಾವೇರಿ: ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ವಂಗಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಪತಿ ಬಸಪ್ಪ ಕಂಬಳಿ(87) ತೀವ್ರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಪತ್ನಿ ದ್ಯಾಮವ್ವ ಬಸಪ್ಪನ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದಿದ್ದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈ ಜೋಡಿ ಐವತ್ತೈದು ವರ್ಷಗಳ ಕಾಲ ಒಟ್ಟಿಗೆ ಜೀವನ ಕಳೆದಿದ್ದು, ಇಲ್ಲಿವರೆಗೂ ಜಗಳವಾಡದೆ ದಾಂಪತ್ಯ ಜೀವನ ನಡೆಸಿದ್ದರು. ನಾಲ್ಕು ಜನ ಮಕ್ಕಳು, ಹನ್ನೊಂದು ಜನ ಮೊಮ್ಮಕ್ಕಳನ್ನು ಈ ದಂಪತಿ ಅಗಲಿದ್ದಾರೆ. ಇದನ್ನೂ ಓದಿ: ರಾಜಪಕ್ಸೆ ಪಲಾಯನ – ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ದಂಪತಿಯ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಕ್ರಿಯೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.