ಹೈದರಾಬಾದ್: ಪ್ರಿಯತಮೆಯ ಜೊತೆ ಇದ್ದಾಗ ಪತಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಮಹಿಳೆ ಆತನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ತೆಲಂಗಾಣದ ಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಾಜು ಪ್ರೇಯಸಿ ಜೊತೆ ಇದ್ದಾಗ ಪತ್ನಿಗೆ ಸಿಕ್ಕಿಹಾಕಿಕೊಂಡ ಪತಿ. ಈತ 2007ರಲ್ಲಿ ಅಮೂಲ್ಯರನ್ನು ಮದುವೆಯಾಗಿದ್ದನು. ಈ ದಂಪತಿಗೆ 8 ವರ್ಷದ ಮಗಳಿದ್ದಾಳೆ. ನಾಗರಾಜು ಟಿಸಿಎಸ್ ತಂಡದ ಲೀಡರ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರ ಸಂಸಾರ ಜೀವನ ಚೆನ್ನಾಗಿ ಇತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆ ಜಗಳವಾಡಿಕೊಂಡು ಇಬ್ಬರು ಬೇರೆ ಬೇರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಪತ್ನಿ ಅಮೂಲ್ಯ ಅವರಿಗೆ ತನ್ನ ಪತಿ ಕಳೆದ ಆರು ತಿಂಗಳಿನಿಂದ ಆತನ ಸಹೋದ್ಯೋಗಿ ಜೊತೆ ತುಂಬಾ ಕ್ಲೋಸ್ ಆಗಿ ಇರುವುದು ತಿಳಿದು ಬಂದಿದೆ. ಇದನ್ನು ಪತ್ತೆ ಮಾಡಲು ಬುಧವಾರ ಸಂಬಂಧಿಗಳೊಂದಿಗೆ ಹಸ್ತಿನಾಪುರಂವನ ದ್ವಾರಕಾನಗರ ಪತಿಯ ಮನೆಗೆ ಏಕಾಏಕಿ ಹೋಗಿದ್ದಾರೆ. ಇತ್ತ ಪತಿ ನಾಗರಾಜು ಪ್ರೇಯಸಿ ಜೊತೆ ಇದ್ದನು. ನಂತರ ನಾಗರಾಜು ಪ್ರಿಯತಮೆ ಜೊತೆ ಇದ್ದಾಗ ರೆಡ್‍ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.
Advertisement
ಪತ್ನಿ ಅಮೂಲ್ಯ ಸಂಬಂಧಿಕರ ಸಹಾಯದಿಂದ ಅವರ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ನಾಗರಾಜುವಿನ ವಿರುದ್ಧ 490 ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇಬ್ಬರಿಗೂ ಕೌನ್ಸಿಲ್ ಮಾಡಿ ಮನೆಗೆ ವಾಪಸ್ ಕಳುಹಿಸಿದ್ದೇವೆ ಎಂದು ಮೀರ್ ಪೇಟ್ ಸಿಐ ಯಾದಯ್ಯ ಅವರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv