ಬೆಂಗಳೂರು: ಬೆಂಗಳೂರಿನ (Bengaluru) ನಿರ್ಮಾತೃ ಕೆಂಪೇಗೌಡರ ಪ್ರತಿಮೆ (Kempegowda Statue) ಅನಾವರಣ ಕಾರ್ಯಕ್ರಮದ ಬಗ್ಗೆ ಇಷ್ಟು ವಿಷಕಾರುವ ಕಾಂಗ್ರೆಸ್‌ನವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು (Tipu) ಮಾತ್ರ ಮನೆದೇವರಾ ಎಂದು ಪ್ರಶ್ನಿಸಿ ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ಕಿಡಿಕಾರಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಕಾಂಗ್ರೆಸ್‍ನ ಕೀಳುಮಟ್ಟದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಎನ್ನುವ ಹಾಗೆ, ಕೆಂಪೇಗೌಡರ ಪ್ರತಿಮೆಯ ಬಗ್ಗೆಯೂ ಇವರ ರಾಜಕೀಯ ನಿಂತಿಲ್ಲ. ಸರ್ಕಾರಿ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೆ ಅಪರಾಧ ಎಂದು ಕರ್ನಾಟಕ ಕಾಂಗ್ರೆಸ್‍ನ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡುತ್ತಾರೆ. ಇದನ್ನೂ ಓದಿ: ಮೋದಿ ತಮ್ಮ ವೈಭವಕ್ಕೆ, ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ: ಡಿಕೆಶಿ ಕಿಡಿ
Advertisement
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಗ್ಗೆ ಇಷ್ಟು ವಿಷಕಾರುವ ಇವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು ಮಾತ್ರ ಮನೆದೇವರಾ ?
ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣುಮಕ್ಕಳನ್ನು ಅತ್ಯಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಭೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು!!
3/3
— Nalinkumar Kateel (@nalinkateel) November 11, 2022
Advertisement
ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣುಮಕ್ಕಳನ್ನು ಅತ್ಯಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಭೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು? ಇನ್ನು ಸಿದ್ದರಾಮಯ್ಯ (Siddaramaiah) ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಬರೀ ಗಿಮಿಕ್ ಎನ್ನುತ್ತಾರೆ. ಕಾಂಗ್ರೆಸ್‍ನ ಶಾಸಕ ತನ್ವಿರ್ ಸೇಠ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಕೆಂಡ ಕಾರಿದ್ದಾರೆ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ