ಬೆಂಗಳೂರು: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಂಪೇಗೌಡ ಕಂಚಿನ ಪ್ರತಿಮೆ (Kempegowda Statue) ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಮೊದಲೇ ಹೇಳಿದ್ದೇನೆ. ಸರ್ಕಾರದ ಹಣ ಖರ್ಚು ಮಾಡೋದು ಬೇಡ ಅಂತ ಹೇಳಿದ್ದೆ. ಬೇಕಿದ್ರೆ ಬೈಟ್ ತೆಗೆದು ನೋಡಲಿ ಎಂದರು.
ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಆಗಬೇಕಿತ್ತು. ನಾವು ಎಲ್ಲ ಸೌಕರ್ಯ ಅವರಿಗೆ ಕೊಟ್ಟಿದ್ದೇವೆ. ಪ್ರತಿಮೆಗೆ ಹಣ ಹಾಕುವುದು ಅವರಿಗೆ ದೊಡ್ಡ ವಿಷಯ ಅಲ್ಲ. ಇವರು ಏನೇನೋ ಲೆಕ್ಕಾಚಾರ ಹಾಕಿ ಮಾಡುತ್ತಿದ್ದಾರೆ. ಇದು ಬೆಸಿಕ್ ಕಾಮನ್ ಸೆನ್ಸ್. ಸರ್ಕಾರದ ದುಡ್ಡು ಹೇಗೆ ಬಳಸಬೇಕು ಅನ್ನೋದು ಬೆಸಿಕ್ ಕಾಮನ್ ಸೆನ್ಸ್. ದೊಡ್ಡ ಹೆಸರು ಮಾಡಬೇಕು ಅಂತಾ ಬಹಳ ಅರ್ಜೆಂಟ್ ನಲ್ಲಿ ಇದ್ದಾರೆ ಎಂದು ಗರಂ ಆದರು.
ಮೋದಿ (Narendra Modi) ಒಂದು ದಿನದ ಕಾರ್ಯಕ್ರಮಕ್ಕೆ 48 ಕೋಟಿ ಖರ್ಚು ವಿಚಾರದ ಕುರಿತು ಮಾತನಾಡಿ, ನೋಡ್ರಿ ತನ್ನ ವೈಭವ, ಪಾರ್ಟಿ ವೈಭವ ಅದಕ್ಕಾಗಿ ಎಷ್ಟು ಖರ್ಚಾಗ್ತಿದೆ ಅನ್ನೋದಕ್ಕೆ ನಿಮ್ಮ ಬಳಿಯೇ ಮಾಹಿತಿ ಇದೆ. ಏನು ವೈಭವ ಮಾಡಿಕೊಳ್ಳಲಿ ಎಷ್ಟೇ ಜನ ಕರೆಸಲಿ ಏನೇ ಮಾಡಿದ್ರೂ ಜನ ಇವರನ್ನು ಕಿತ್ತೊಗೆಯಬೇಕು ಅಂತ ಸಂಕಲ್ಪ ಮಾಡಿದ್ದಾರೆ ಎಂದರು.
ಮೋದಿ ಹೋಗುವ ರಸ್ತೆ ಮಾತ್ರ ಸರಿಯಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಅವರ ನಾಯಕರ ಸಲುವಾಗಿ ಮಾಡಿದ್ದಾರೆ ಹೊರತು ಜನರ ಸಲುವಾಗಿ ಮಾಡಿಲ್ಲ. ಯುವಕರೇ ರಸ್ತೆ ಗುಂಡಿಗಳಲ್ಲಿ ಹೋಮ ಹವನ ಶುರು ಮಾಡ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬರೆದ ಪತ್ರಕ್ಕೆ ಉತ್ತರ ಕೊಡ್ತಾರೆ ಅನ್ನೋ ವಿಶ್ವಾಸವಿದೆ. ಇನ್ನೊಬ್ಬರು ಲಂಚದಿಂದ ಹರಾಸ್ ಮೆಂಟ್ ಆಗ್ತಿದೆ ಅಂತ ದಯಾ ಮರಣಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಒಂದು ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕು. ಮೋದಿ ತಮ್ಮ ವೈಭವಕ್ಕೆ, ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ. ಪತ್ರಕ್ಕೆ ಉತ್ತರ ಬಂದಿಲ್ಲ ಅಂದ್ರೆ ಮುಂದೆ ಏನು ಮಾಡಬೇಕೋ ಮಾಡ್ತೇವೆ. ಮುಂದಿನ ಹೋರಾಟದ ಬಗ್ಗೆ ಈಗಲೇ ಹೇಳಲ್ಲ. ಐದು ನಿಮಿಷಕ್ಕೆ ಊಟ ರೆಡಿ ಆಗತ್ತಾ? ಮಸಾಲೆ ರೆಡಿ ಮಾಡಬೇಕು ಕಟ್ಟಿಗೆ ರೆಡಿ ಮಾಡಬೇಕು ಎಂದು ಡಿಕೆಶಿ ತಿಳಿಸಿದರು.