Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಭಾರತ-ಇರಾನ್‌ ಒಪ್ಪಂದಕ್ಕೆ ಅಮೆರಿಕ ವಿರೋಧ ಯಾಕೆ? – ‘ಚಾಬಹಾರ್‌’ ಬಂದರಿನಿಂದ ಭಾರತಕ್ಕಿರೋ ಅನುಕೂಲಗಳೇನು?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | ಭಾರತ-ಇರಾನ್‌ ಒಪ್ಪಂದಕ್ಕೆ ಅಮೆರಿಕ ವಿರೋಧ ಯಾಕೆ? – ‘ಚಾಬಹಾರ್‌’ ಬಂದರಿನಿಂದ ಭಾರತಕ್ಕಿರೋ ಅನುಕೂಲಗಳೇನು?

Latest

ಭಾರತ-ಇರಾನ್‌ ಒಪ್ಪಂದಕ್ಕೆ ಅಮೆರಿಕ ವಿರೋಧ ಯಾಕೆ? – ‘ಚಾಬಹಾರ್‌’ ಬಂದರಿನಿಂದ ಭಾರತಕ್ಕಿರೋ ಅನುಕೂಲಗಳೇನು?

Last updated: May 22, 2024 12:58 pm
By
Share
6 Min Read
chabahar port india iran

ಐರೋಪ್ಯ ರಾಷ್ಟ್ರಗಳೊಟ್ಟಿಗೆ ವ್ಯಾಪಾರ ವಹಿವಾಟಿಗೆ ಹೆಬ್ಬಾಗಿಲಾಗಿರುವ ಚಾಬಹಾರ್ ಬಂದರಿನ (Chabahar Port) ನಿರ್ವಹಣೆ ವಿಚಾರ 20 ವರ್ಷಗಳ ನಂತರ ಮತ್ತೆ ಮುನ್ನಲೆಗೆ ಬಂದಿದೆ. ಇರಾನ್‌ನೊಂದಿಗೆ ಭಾರತ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ಹೇಳಲಾಗಿದೆ. ಆದರೆ ಭಾರತ ಮತ್ತು ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದಕ್ಕೆ ಅಮೆರಿಕ ಅಡ್ಡಗಾಲು ಇಟ್ಟಿದೆ. ಯಾವುದೇ ಕಾರಣಕ್ಕೂ ಇರಾನ್‌ನೊಂದಿಗೆ(Iran) ಭಾರತ ಒಪ್ಪಂದ ಮಾಡಿಕೊಳ್ಳಬಾರದು. ಹಾಗೇನಾದರು ಮಾಡಿದರೆ ನಿರ್ಬಂಧಗನ್ನು ಹೇರಬೇಕಾಗುತ್ತದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಚಾಬಹಾರ್ ಬಂದರು ಮತ್ತು ಅದರಿಂದ ಭಾರತಕ್ಕಾಗುವ ಅನುಕೂಲಗಳ ಬಗ್ಗೆ ಚರ್ಚೆ ಶುರುವಾಗಿದೆ.

ಅಷ್ಟಕ್ಕೂ ಏನಿದು ಚಾಬಹಾರ್ ಬಂದರು? ಹಿನ್ನೆಲೆ ಏನು? ಇರಾನ್‌ನೊಂದಿಗೆ ಭಾರತದ (India) ಒಪ್ಪಂದವೇನು? ಭಾರತಕ್ಕೆ ಬಂದರು ಏಕೆ ಮುಖ್ಯ? ಇದನ್ನೂ ಓದಿ: ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

chabahar port deal india iran

ಬಂದರು ಒಪ್ಪಂದಕ್ಕೆ ವಾಜಪೇಯಿ ಅಡಿಪಾಯ
ಇರಾನ್‌ನೊಂದಿಗೆ ಚಾಬಹಾರ್ ಬಂದರು ಒಪ್ಪಂದಕ್ಕೆ ಅಡಿಪಾಯ ಹಾಕಿದವರು ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಇರಾನ್‌ನ ಚಾಬಹಾರ್ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳ ನಡುವೆ 2003 ರಲ್ಲಿ ಒಪ್ಪಂದವಾಗುತ್ತದೆ. ಈ ಒಪ್ಪಂದ ಭಾರತೀಯ ಆರ್ಥಿಕತೆ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಯ ಪ್ರವೇಶಕ್ಕೆ ಭರವಸೆಯ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ.

More Read

Donald Trump 1
ಇರಾನ್‌ ಜೊತೆ ಇಂದು ಡೀಲ್‌.. ಒಪ್ಪಂದ ಆದ ತಕ್ಷಣ ಹಾರ್ಮುಜ್‌ ಜಲಸಂಧಿ ಓಪನ್:‌ ಟ್ರಂಪ್‌
d.k.shivakumar
ಗ್ಯಾರಂಟಿ ಕಳ್ಳಾಟಕ್ಕೆ ಬ್ರೇಕ್; ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ
No Water Storage In Dams No Rain
ಮುಂಗಾರು ಆರಂಭವಾದ್ರೂ ಮಳೆ ಸುಳಿವಿಲ್ಲ – ಕೆಲ ಜಿಲ್ಲೆಗಳ ಜೀವಜಲ ಖಾಲಿ ಖಾಲಿ

ಏನಿದು ಚಾಬಹಾರ್ ಒಪ್ಪಂದ?
ಚಾಬಹಾರ್ ಬಂದರು ಇರಾನ್‌ನ ನೈಋತ್ಯ ಕರಾವಳಿಯಲ್ಲಿದೆ. ಪಾಕಿಸ್ತಾನದ ಗ್ವಾದರ್ ಬಂದರಿನಿಂದ 72 ಕಿಲೋಮೀಟರ್ ದೂರದಲ್ಲಿದೆ. ಈ ಬಂದರು ಭಾರತದ ಪಶ್ಚಿಮ ಕರಾವಳಿ ಮತ್ತು ಇರಾನ್ ಅನ್ನು ಸಂಪರ್ಕಿಸುತ್ತದೆ. ವೇಗವಾದ ಕಡಲ ವ್ಯಾಪಾರಕ್ಕಾಗಿ ಸಾಗಣೆ ಮಾರ್ಗವನ್ನು ಇದು ತೆರೆಯುತ್ತದೆ. ಚಾಬಹಾರ್ ಬಂದರು ಭಾರತ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ಸಂಪರ್ಕಕ್ಕೆ ಸೇತುವೆ ಇದ್ದಂತೆ. ಕೊಲ್ಲಿಯಲ್ಲಿ ಭಾರತೀಯ ಸರಕುಗಳಿಗೆ ಮಾರುಕಟ್ಟೆಯನ್ನು ತೆರೆಯುತ್ತದೆ. ಈ ಎಲ್ಲಾ ಅನುಕೂಲಗಳ ಉದ್ದೇಶದಿಂದ ಇರಾನ್‌ನೊಂದಿಗೆ ಭಾರತ 2003 ರಲ್ಲಿ ಒಪ್ಪಂದ ಮಾಡಿಕೊಂಡಿತು.

india iran chabahar port deal

ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಭಾರತ ಮತ್ತು ಇರಾನ್ ಸರ್ಕಾರಗಳು 2003, 2015 ಮತ್ತು 2017 ರಲ್ಲಿ ಒಪ್ಪಂದ ಮಾಡಿಕೊಂಡವು. 2018 ರಿಂದ ಈ ಬಂದರನ್ನು ಭಾರತವೇ ನಿರ್ವಹಣೆ ಮಾಡುತ್ತಿತ್ತು. ಈಗ ಬಂದರು ನಿರ್ವಹಣೆ ಒಪ್ಪಂದವನ್ನು 10 ವರ್ಷಗಳಿಗೆ ವಿಸ್ತರಣೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

ಒಪ್ಪಂದದಿಂದ ಭಾರತಕ್ಕೆ ಲಾಭವೇನು?
ಭಾರತವು ಈಗ ಐರೋಗ್ಯ ದೇಶಗಳೊಡನೆ ತನ್ನ ವ್ಯಾಪಾರ ವಹಿವಾಟನ್ನು ಸಮುದ್ರ ಮಾರ್ಗದ ಮೂಲಕವೇ ನಡೆಸುತ್ತದೆ. ಭಾರತದ ಸರಕುಗಳು ಕೆಂಪು ಸಮುದ್ರದ ಮೂಲಕವೇ ಯುರೋಪ್ ದೇಶಗಳನ್ನು ತಲುಪುತ್ತದೆ. ಇದು ದೀರ್ಘವಾಗಿದ್ದು, ಸುಮಾರು 15,000 ದಿಂದ 15,500 ಕಿಮೀ ನಷ್ಟು ದೂರದ ಮಾರ್ಗವಾಗಿದೆ. ಒಂದು ವೇಳೆ ಚಾಬಹಾರ್ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ, ಐರೋಪ್ಯ ದೇಶಗಳಿಗೆ ಭಾರತದ ಸರಕು ಸಾಗಣೆಗೆ ತುಂಬಾ ಅನುಕೂಲ ಆಗಲಿದೆ.

ಚಾಬಹಾರ್ ಒಪ್ಪಂದದ ಮೂಲಕ ಭಾರತವು ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ನ ಭಾಗವಾದರೆ, ಸರಕು ಸಾಗಣೆ ಮಾರ್ಗವನ್ನು 7,200 ಕಿಮೀಗೆ ಇಳಿಸಬಹುದು. ಇದರಿಂದ ಸರಕುಗಳ ಸಾಗಣೆ ವೇಗವಾಗಿ ಆಗುತ್ತದೆ. ಜೊತೆಗೆ ಭಾರತಕ್ಕೆ ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ. ಈ ಕಾರಣದಿಂದಾಗಿಯೇ ಭಾರತಕ್ಕೆ ಒಪ್ಪಂದ ತುಂಬಾ ಅಗತ್ಯವಾಗಿದೆ.

chabahar port deal map

ಚೀನಾ ಪ್ರಾಬಲ್ಯಕ್ಕೆ ಬ್ರೇಕ್?
ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಡನೆಯೂ ಭಾರತ ವ್ಯಾಪಾರ ವಹಿವಾಟು ನಡೆಸಲು ಸಹಕಾರಿಯಾಗಲಿದೆ. ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಹಲವು ಬಂದರುಗಳನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಈ ಸನ್ನಿವೇಶದಲ್ಲಿ ಚಾಬಹಾರ್ ಬಂದರು ಭಾರತದ ನಿಯಂತ್ರಣಕ್ಕೆ ಬಂದರೆ, ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ತಡೆ ಒಡ್ಡಿದಂತೆ ಆಗುತ್ತದೆ.

ಏನಿದು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್?
ಉಕ್ರೇನ್ ಹಾಗೂ ಇಸ್ರೇಲ್ ಜೊತೆಗಿನ ಸಂಘರ್ಷದಿಂದಾಗಿ ರಷ್ಯಾ ಮತ್ತು ಇರಾನ್ ಅಮೆರಿಕದ ಮಿತ್ರ ರಾಷ್ಟçಗಳ ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿವೆ. ಪರಿಣಾಮವಾಗಿ ವಿಶ್ವದ ಬೇರೆ ದೇಶಗಳೊಂದಿಗೆ ಇವುಗಳ ವ್ಯಾಪಾರ-ವಾಣಿಜ್ಯ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಆರ್ಥಿಕ ದಿಗ್ಬಂಧನದಿಂದ ಇರಾನ್ ಮತ್ತು ರಷ್ಯಾಗೆ ಭೂಮಾರ್ಗ, ಜಲಮಾರ್ಗ ಮುಚ್ಚಿಹೋಗಿದೆ. ಇದಕ್ಕೆ ಈ ಎರಡೂ ದೇಶಗಳು ಕಂಡುಕೊಂಡ ಪರಿಹಾರವೇ ‘ಅಂತರರಾಷ್ಟ್ರೀಯ ಉತ್ತರ ಮತ್ತು ದಕ್ಷಿಣ ಸಾರಿಗೆ ಕಾರಿಡಾರ್’. ಇದು ರೈಲು, ರಸ್ತೆ ಮತ್ತು ಸಮುದ್ರ ಮಾರ್ಗವನ್ನೂ ಒಳಗೊಂಡಿದೆ. ಇದರಿಂದ ಭಾರತಕ್ಕೆ ತುಂಬಾ ಅನುಕೂಲವಾಗಲಿದೆ. ಚಾಬಹಾರ್ ಬಂದರಿನ ಮೂಲಕ ಈ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಬಹುದು. ಭಾರತ ಯೂರೋಪ್ ದೇಶಗಳೊಂದಿಗೆ ರಫ್ತು-ಆಮದು ವಹಿವಾಟನ್ನು ಈ ಕಾರಿಡಾರ್ ಮೂಲಕ ನಡೆಸಿದರೆ ಹಲವು ಲಾಭಗಳಿವೆ. ಇದನ್ನೂ ಓದಿ: ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

ಕಚ್ಚಾತೈಲ ಬೆಲೆ ಇಳಿಕೆ?
ರಷ್ಯಾದಿಂದ ಭಾರತ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಕೂಡ ಕೆಂಪು ಸಮುದ್ರ ಮಾರ್ಗದ ಮೂಲಕವೇ ಬರುತ್ತಿದೆ. ಒಂದು ವೇಳೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಕಾರಿಡಾರ್ ಮೂಲಕ ತರಿಸಿಕೊಂಡರೆ ಭಾರತಕ್ಕೆ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಕಚ್ಚಾತೈಲ ಬೆಲೆಯೂ ಕಡಿಮೆಯಾಗಬಹುದು. ಕಡಿಮೆ ಬೆಲೆಗೆ ಸಿಗುವ ಕಚ್ಚಾತೈಲದ ಮೇಲಿನ ಲಾಭವನ್ನು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ವರ್ಗಾಯಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲೂ ಇಳಿಕೆಯಾಗಲಿದೆ. ಇದರಿಂದ ಜನಸಾಮಾನ್ಯರಿಗೂ ಅನುಕೂಲ ಆಗಲಿದೆ.

joe biden 1

ಅಮೆರಿಕ ಅಡ್ಡಗಾಲೇಕೆ?
ಇರಾನ್ ಮತ್ತು ಭಾರತ ನಡುವಿನ ಚಾಬಹಾರ್ ಒಪ್ಪಂದಕ್ಕೆ ಅಮೆರಿಕ ಸಿಡಿಮಿಡಿಗೊಂಡಿದೆ. ಒಂದು ವೇಳೆ ಭಾರತ ಈ ಒಪ್ಪಂದ ಮಾಡಿಕೊಂಡರೆ, ಆರ್ಥಿಕ ದಿಗ್ಬಂಧನ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಅಮೆರಿಕದ ಸಿಟ್ಟಿಗೂ ಹಲವು ಕಾರಣಗಳಿವೆ.

1979 ರಲ್ಲಿ, ಟೆಹ್ರಾನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯನ್ನು ಅತಿಕ್ರಮಿಸುವ ಪ್ರಯತ್ನದ ನಂತರ ಇರಾನ್ ಅಮೆರಿಕನ್ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿತು. ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಸಂಧಾನದ ಪ್ರಯತ್ನಗಳ ಹೊರತಾಗಿಯೂ, ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿತು. ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಲು ಆಹ್ವಾನಿಸಲಾಯಿತು. ಆದರೆ 1980 ರ ಹೊತ್ತಿಗೆ ಯುನೈಟೆಡ್ ಸ್ಟೇಟ್ಸ್ ಅಧಿಕೃತವಾಗಿ ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಜೊತೆಗೆ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಕಾರಣದಿಂದಲೂ ಹಲವು ವರ್ಷಗಳಿಂದ ಅಮೆರಿಕದ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿದೆ.

ಈಗ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳ ಬೆಂಬಲಿತ ಇಸ್ರೇಲ್ ಮೇಲೆಯೂ ಇರಾನ್ ಯುದ್ಧ ನಡೆಸುತ್ತಿದೆ. ಪ್ಯಾಲೆಸ್ತೀನ್ ಕಾರಣಕ್ಕೆ ಇಸ್ರೇನ್ ಮತ್ತು ಇರಾನ್ ಸಂಘರ್ಷಕ್ಕಿಳಿದಿವೆ. ಸಹಜವಾಗಿ ಇದು ಕೂಡ ಇರಾನ್ ವಿರುದ್ಧ ಅಮೆರಿಕ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಅಮೆರಿಕ ಮಿತ್ರ ರಾಷ್ಟçಗಳು ಇರಾನ್ ಮೇಲೆ ದಿಗ್ಬಂಧನ ಹೇರಿವೆ. ಇತ್ತ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದ ಕಾರಣ ರಷ್ಯಾ ಮೇಲೆಯೂ ಅಮೆರಿಕ-ಐರೋಪ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಹೇರಿವೆ.

china india

ಅಮೆರಿಕ ಎಚ್ಚರಿಕೆ ಏನು?
ಇರಾನ್ ಮತ್ತು ಭಾರತದ ಒಪ್ಪಂದದ ಕುರಿತು ತಿಳಿದಿದೆ. ಇರಾನ್ ಮೇಲೆ ಹೇರಿರುವ ದಿಗ್ಬಂಧನವು ಮುಂದುವರಿಯಲಿದೆ. ಯಾವುದೇ ದೇಶವು ಇರಾನ್‌ನೊಂದಿಗೆ ಒಪ್ಪಂದಕ್ಕೆ ಮುಂದಾದರೆ, ಆ ದೇಶ ಕೂಡ ಆರ್ಥಿಕ ದಿಗ್ಬಂಧನ ಎದುರಿಸುವುದಕ್ಕೆ ಸಿದ್ಧವಾಗಬೇಕು. ಹಿಂದೆಯೂ ಅದನ್ನೇ ಹೇಳಿದ್ದೇವೆ. ಈಗಲೂ ಆ ನಿಲುವಿಗೆ ಬದ್ಧವಾಗಿದ್ದೇವೆ ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಫಸ್ಟ್‌ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ!

ಭಾರತದ ಪ್ರತಿಕ್ರಿಯೆ ಏನು?
ಬಂದರು ನಿರ್ಮಾಣದಿಂದಾಗುವ ಲಾಭದ ಕುರಿತು ಜಗತ್ತಿಗೆ ನಾವು ಮನವರಿಕೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ಭಾರತವು ಈ ಬಂದರಿನಿಂದಾಗುವ ಅನುಕೂಲಗಳ ಬಗ್ಗೆ ಜಗತ್ತಿಗೆ ಒತ್ತಿ ಹೇಳಲಿದೆ ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.

ಆರ್ಥಿಕ ದಿಗ್ಬಂಧನದಿಂದ ಭಾರತಕ್ಕೆ ಪೆಟ್ಟು?
* ತೈಲ ಉತ್ಪಾದನಾ ದೇಶಗಳಲ್ಲಿ (ಒಪೆಕ್+) ಹಲವು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಒಂದು ವೇಳೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದರೆ ಭಾರತದ ತೈಲ ಆಮದು ಮೇಲೆ ಹೊಡೆತ ಬೀಳಲಿದೆ. ಇದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಪರಿಣಾಮ ಉಂಟಾಗಲಿದೆ.
* ಅಮೆರಿಕ ಜೊತೆಗಿರುವ ದೇಶಗಳಿಗೂ ಭಾರತ ಮಾಡುತ್ತಿರುವ ರಫ್ತಿನ ಮೇಲೂ ಹೆಚ್ಚಿನ ಪರಿಣಾಮ ಬೀರಲಿದೆ.
* ಭಾರತವು ಅಂತರರಾಷ್ಟ್ರೀಯ ವ್ಯವಹಾರಗಳನ್ನು ಡಾಲರ್‌ನಲ್ಲಿ ನಡೆಸುತ್ತದೆ. ಆರ್ಥಿಕ ದಿಗ್ಬಂಧನವಾದರೆ, ರಫ್ತು-ಆಮದು ಹಣದ ವರ್ಗಾವಣೆಗೆ ತಾಂತ್ರಿಕ ತೊಡಕು ಎದುರಾಗಬಹುದು.

Share This Article
Facebook Whatsapp Whatsapp Telegram Copy Link
Cinema News
Rangayanraghu
400 ಸಿನಿಮಾ ಪೂರೈಸಿದ ರಂಗಾಯಣ ರಘು
ayyana mane
‘ಅಯ್ಯನ‌ ಮನೆ’ ವೆಬ್ ಸೀರೀಸ್‌ಗೆ e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್
TVK Vijay and sangeeta
ಕೊಲ್ಲೂರು ಭೇಟಿ ಬಳಿಕ ವಿಜಯ್‌ ದಾಂಪತ್ಯದಲ್ಲಿ ಹೊಸ ಭರವಸೆ – ಸಂಗೀತಾ ಜೊತೆ ಸಂಧಾನಕ್ಕೆ ರೆಡಿಯಾದ್ರಾ ದಳಪತಿ?
actor doddanna
ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ನಟ ದೊಡ್ಡಣ್ಣ

You Might Also Like

Ram Mandir

ಅಯೋಧ್ಯೆ ರಾಮಮಂದಿರ ಸಿಬ್ಬಂದಿ ಮನೆಯಲ್ಲಿ 10 ಲಕ್ಷ ಹಣ ಪತ್ತೆ

2 hours ago
Bidadi Township DK Shivakumar HD Kumaraswamy

ಕಿಚ್ಚು ಹೆಚ್ಚಿಸಿದ ಬಿಡದಿ ಟೌನ್‌ಶಿಪ್ ಜಟಾಪಟಿ – ಜೂನ್ 22ರಂದು ಹೋರಾಟಕ್ಕೆ ರೈತರ ಸಿದ್ಧತೆ

2 hours ago
AI Designed Vaccine

ಎಐ ಅಭಿವೃದ್ಧಿಪಡಿಸಿದ ಲಸಿಕೆ; ಭವಿಷ್ಯದ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸಬಹುದೇ?

15 hours ago
daily horoscope dina bhavishya 5

ದಿನ ಭವಿಷ್ಯ 14-06-2026

17 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact