ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

Public TV
2 Min Read
Bigg Boss 1

ದೊಡ್ಮನೆಯಲ್ಲಿ ಮತ್ತೆ ವಿನಯ್ ಗುಡುಗಿದ್ದಾರೆ. ಬಲು ಆತ್ಮ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ. ಬಳೆ ಪ್ರಕರಣದ ನಂತರ ವಿನಯ್ (Vinay) ತಣ್ಣಗಾಗುತ್ತಾರೆ ಎಂದು ನಂಬಲಾಗಿತ್ತು. ಆ ರೀತಿಯಲ್ಲಿ ಸುದೀಪ್ ಝಾಡಿಸಿದ್ದರು. ಕಿಚ್ಚನ ಮಾತಿಗೆ ಕ್ಯಾರೆ ಎನ್ನದೇ ಮತ್ತೆ ತಮ್ಮ ಫಾರ್ಮಗೆ ಮರಳಿದ್ದಾರೆ ವಿನಯ್. ಹಾಗಾಗಿ ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಅವರ ಟೀಮ್ ನಲ್ಲೇ ಕಿತ್ತಾಟ ಕೂಡ ನಡೆದಿತ್ತು. ಏನೇ ಆದರೂ, ತಲೆ ಕೆಡಿಸಿಕೊಳ್ಳದೇ ಈ ಬಾರಿ ಬಿಗ್ ಬಾಸ್ ಟೈಟಲ್ ಗೆಲ್ಲೋದು (Win) ನಾನೇ ಎಂದು ಘೋಷಿಸಿಕೊಂಡಿದ್ದಾರೆ.

Bigg Boss 1 17

ಬಿಗ್ ಬಾಸ್ (Bigg Boss Kannada) ಮುಗಿಯೋಕೆ ಇನ್ನೂ ಅರ್ಧ ಜರ್ನಿ ಬಾಕಿ ಇದೆ. ಯಾರು ಮನೆಯಲ್ಲಿ ಉಳಿಯುತ್ತಾರೋ, ಇಲ್ಲವೋ ಒಂದೂ ಗೊತ್ತಿಲ್ಲ. ವಾರದಿಂದ ವಾರಕ್ಕೆ ಅಚ್ಚರಿ ಕಂಟೆಸ್ಟೆಂಟ್ ಗಳು ಎಲಿಮಿನೇಟ್ ಆಗುತ್ತಿದ್ದಾರೆ. ಇದಾವುದನ್ನೂ ಲೆಕ್ಕಿಸದೇ ವಿನಯ್, ಧೈರ್ಯವಾಗಿ ತಾವೇ ಗೆಲುವಿನ ಕುದುರೆ ಎಂದು ಹೇಳಿಕೊಂಡಿದ್ದಾರೆ. ವಿನಯ್ ಮಾತಿಗೆ ಮತ್ತೋರ್ವ ಸ್ಪರ್ಧಿ ಸ್ನೇಹಿತ್ ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಆನೆಗೆ ಮತ್ತಷ್ಟು ಬಲ ಬಂದಿದೆ. ತಾನು ನಡೆದದ್ದೇ ಹಾದಿ ಎಂದು ಹೇಳಿಕೊಂಡಿದೆ.

Bigg Boss 2 8

ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆವರೆಗೂ ನಾವು ಮೂವರೇ ಇರಬೇಕು ಎಂದು ಮಾತನಾಡಿಕೊಂಡಿದ್ದಾರೆ. ಆದರೆ, ಈ ವಾರ ನಮ್ರತಾ ಅವರು ವಿನಯ್ ಗೆ ಸಖತ್ ಠಕ್ಕರ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಗುಂಪಿನಿಂದ ಹೊರ ನಡೆದಿದ್ದಾರೆ.

bigg boss 6

ನಮ್ರತಾ ಗುಂಪಿನಿಂದ ಹೊರ ಹೋಗುತ್ತಿದ್ದಂತೆಯೇ ಸ್ನೇಹಿತ್ ಮತ್ತು ವಿನಯ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ. ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ.

ಸದ್ಯ ವಿನಯ್ ತಮ್ಮನ್ನು ತಾವು ಗೆಲುವಿನ ಕುದುರೆ ಅಂದುಕೊಂಡಿದ್ದಾರೆ. ನಿಜವಾಗಿಯೂ ಅವರು ಕನಸು ಈಡೇರತ್ತಾ? ಅಥವಾ ಅರ್ಧಕ್ಕೆ ವಾಪಸ್ಸು ಬರ್ತಾರಾ? ಎಂದು ಕಾದು ನೋಡಬೇಕು.

Share This Article