ಚಾಮರಾಜನಗರ: ದೇವಸ್ಥಾನಕ್ಕೆ ಇಂತಹದ್ದನ್ನೇ ತಿಂದು ಹೋಗಬೇಕು ಅಂತ ಯಾರು ಹೇಳಿದ್ದಾರೆ? ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರನ್ನೂ ಚೆಕ್ ಮಾಡೋಕಾಗುತ್ತಾ? ಎಂದು ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಆಹಾರ ಸೇವನೆ ಅವರವರ ಇಚ್ಛೆ. ಆದರೆ ಬಿಜೆಪಿಯವರು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಜಮೀರ್‌ಗೆ ಹಂದಿ ಮಾಂಸ ತಿನ್ನುವಂತೆ ಹೇಳಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆಯವರು ಹಂದಿ ಮಾಂಸ, ಬೀಫ್ ತಿನ್ನೋದಿಲ್ಲ. ಬೇರೆಯವರನ್ನು ತಿನ್ನಿ ಎಂದು ಹೇಳೋಕಾಗುತ್ತಾ? ಬಲವಂತವಾಗಿ ಪ್ರತಾಪ್ ಸಿಂಹ ಬಂದು ತಿನ್ನಿಸಲು ಆಗುತ್ತಾ? ಆಹಾರ ಸೇವನೆ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಅನಗತ್ಯ ವಿಚಾರಗಳನ್ನು ಸೃಷ್ಟಿ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮಾಜಿ ಶಾಸಕ ಎಂ.ಡಿ ಲಕ್ಷ್ಮಿ ನಾರಾಯಣ್ ಗುಡ್ ಬೈ
Advertisement
Advertisement
ಯಾರು ಏನು ತಿನ್ನುತ್ತಾರೆ ಎನ್ನುವುದನ್ನು ಕಟ್ಟಿಕೊಂಡು ನಾಡಿಗೇನು ಪ್ರಯೋಜನ? ಇದರಿಂದ ಜನರ ಸಮಸ್ಯೆ ಪರಿಹಾರವಾಗುತ್ತಾ? ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಕೋಮು ಗಲಭೆ ನಡೆಯುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕರು ಸರಿಯಾಗಿ ಕೆಲಸ ಮಾಡುತ್ತಿದ್ದಾರಾ ಎನ್ನುವುದು ಮುಖ್ಯ ಎಂದು ಅವರು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನ 2 ಕಡೆ ಮೊಟ್ಟೆ ದಾಳಿ