ಬೆಂಗಳೂರು: ಗುಜರಾತ್ ನಲ್ಲಿ ಪ್ರಯಾಸದ ಗೆಲುವು ಕಂಡಿರೋ ಬಿಜೆಪಿಗೆ ಮುಖ್ಯಮಂತ್ರಿ ಆಯ್ಕೆ ಹಾದಿ ಕೂಡ ಕಠಿಣವಾಗಿದೆ.
ಹಾಲಿ ಸಿಎಂ ವಿಜಯ್ ರೂಪಾನಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರೋದ್ರಿಂದ ಮತ್ತೆ ಮುಂದುವರಿಯೋದು ಅನುಮಾನ. ಇನ್ನು ಪಟೇಲ್ ಆಂದೋಲನದ ಪ್ರಭಾ ಹತ್ತಿಕ್ಕಲು ಹಾಲಿ ಡಿಸಿಎಂ ನಿತಿನ್ ಪಟೇಲ್ ಹೆಸರು ಕೇಳಿಬಂದಿದೆ. ಇದರ ಜೊತೆಗೆ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾರನ್ನು ಗುಜರಾತ್‍ಗೆ ವಾಪಾಸ್ ಕರೆಸಿ ಸಿಎಂ ಮಾಡಬಹುದು ಎಂಬ ಊಹಾಪೋಹವೊಂದು ಕೇಳಿಬರುತ್ತಿದೆ. ಆದ್ರೆ ವಾಲಾಗೆ ವಯಸ್ಸಾಗಿದ್ದು, ಅವರು ಸಿಎಂ ಆಗಲ್ಲ ಎನ್ನಲಾಗ್ತಿದೆ. ಇದನ್ನೂ ಓದಿ: ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ
Advertisement
Advertisement
ಈ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೂಡ ಕೇಳಿಬಂದಿದೆ. ಅತ್ತ ಹಿಮಾಚಲ ಪ್ರದೇಶದಲ್ಲಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧಮಾಲ್, ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್ ಸತ್ತಿ ಅವರೇ ಸೋತಿರೋದು ಬಿಜೆಪಿಗೆ ತಲೆನೋವಾಗಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಬಿಜೆಪಿಯ ಮೊದಲ ಚಾಯ್ಸ್ ಎಂದು ಹೇಳಲಾಗ್ತಿದೆ. ಇವರ ಜೊತೆಗೆ ಧಮಾಲ್ ಪುತ್ರ ಅನುರಾಗ್ ಠಾಕೂರ್ ಹೆಸರು ಸಿಎಂ ರೇಸ್‍ನಲ್ಲಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?
Advertisement
Advertisement
ಒಟ್ಟಿನಲ್ಲಿ ಮುಂದಿನ ಸಿಎಂ ಯಾರು ಆಗ್ತಾರೆ ಅನ್ನೋದನ್ನ ನಿರ್ಧರಿಸಲು ಕೇಂದ್ರ ಸಚಿವ ಅರುಣ್ ಜೇಟ್ಲಿ ಗುಜರಾತ್‍ಗೆ ತೆರಳಿದ್ರೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಿಮಾಚಲ ಪ್ರದೇಶದ ಹೊಣೆ ನೀಡಲಾಗಿದೆ. ಇಂದು ಸಭೆ ನಡೆಸಿ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದನ್ನ ನಿರ್ಧರಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?