ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಸತತ 6ನೇ ಬಾರಿಗೆ ಸರ್ಕಾರ ರಚನೆಗೆ ಸಿದ್ಧವಾಗ್ತಿದೆ. ಗುಜರಾತ್‍ನಲ್ಲಿ ಬಿಜೆಪಿ ಗೆಲುವಿಗೆ ವರದಾನವಾಗಿದ್ದೇನು ಹಾಗೂ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳೇನು ಅನ್ನೋದು ಇಲ್ಲಿದೆ.
Advertisement
ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ?: ವಿಕಾಸ, ರಾಮಮಂದಿರ ಜಪದಿಂದ ಬಿಜೆಪಿಗೆ ಗೆಲುವು ಸಿಕ್ಕಿದೆ. ನಗರ ಪ್ರದೇಶಗಳಲ್ಲಿ ಮೋದಿ ರ‍್ಯಾಲಿ ವರದಾನವಾದಂತಿದೆ. 34 ಕಡೆ ಮೋದಿ ರ‍್ಯಾಲಿ ನಡೆಸಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್. ವಿಶೇಷವಾಗಿ ಯುವ ಮತದಾರರು ಮೋದಿ ಮುಖವನ್ನು ನೋಡಿ ಮತ ಹಾಕಿದ್ದಾರೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.
Advertisement
Advertisement
ಮೀಸಲಾತಿ ಪರ ಪಟೇಲ್ ಸಮುದಾಯವರು ಹೋರಾಟ ನಡೆಸಿದರೂ ಬಹಳಷ್ಟು ಹೋರಾಟಗಾರರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮಧ್ಯೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಬಿಡುಗಡೆಯಾದ ಬಳಿಕ ಹಾರ್ದಿಕ್ ಪಟೇಲ್ ವಿರೋಧಿಗಳ ಸಂಖ್ಯೆ ಜಾಸ್ತಿಯಾಗಿದ್ದು ಬಿಜೆಪಿಗೆ ವರದಾನವಾಯಿತು.
Advertisement
ಗುಜರಾತ್‍ನಲ್ಲಿ ಕಾಂಗ್ರೆಸ್ ಸೋತಿದ್ದೆಲ್ಲಿ?: ನವಸಾರಿ, ಅರ್ವಾಲಿ ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆಯಾಗಿದೆ. ಮಣಿಶಂಕರ್ ಅಯ್ಯರ್ ‘ನೀಚ’ ಪದ ಬಳಕೆ ಕಾಂಗ್ರೆಸ್‍ಗೆ ದೊಡ್ಡ ಹೊಡೆತ ನೀಡಿದೆ. ‘ರಾಮಮಂದಿರ’ ಕುರಿತ ಕಪಿಲ್ ಸಿಬಲ್ ಹೇಳಿಕೆಯಿಂದಲೂ ಡ್ಯಾಮೇಜ್ ಆಗಿದೆ ಅಂತ ವಿಶ್ಲೇಷಿಸಲಾಗಿದೆ.
ಇದರ ಜೊತೆಯಲ್ಲೇ ಗುಜರಾತ್‍ನಲ್ಲಿ ಭೀಕರ ನೆರೆ ಬಂದಾಗಲೂ ರಾಜ್ಯಸಭೆಗೆ ನಿಂತಿದ್ದ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ಗೆ ಶಿಫ್ಟ್ ಆಗಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿದ್ದರಿಂದ ಮತ್ತೊಮ್ಮೆ ಜನ ಕಮಲದ ಕೈ ಹಿಡಿದ್ದಾರೆ.
ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?