Bollywood

ಶಾರೂಖ್‌ ಪುತ್ರನ ಜೊತೆ ಬಂಧಿತ ಆಕೆ ಯಾರು?

Published

on

Share this

ಮುಂಬೈ: ಕಡಲ ಮಧ್ಯೆ ಹಡಗಿನಲ್ಲೇ ಕಿಕ್‌ ಪಾರ್ಟಿ ನಡೆಸುತ್ತಿದ್ದ ಶಾರೂಖ್‌ ಖಾನ್‌ ಪುತ್ರ ಸೇರಿ 8 ಮಂದಿಯನ್ನು ಎನ್‌ಸಿಬಿ ಬಂಧಿಸುತ್ತಿದ್ದಂತೆಯೇ ಆ ಉಳಿದ 7 ಮಂದಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಒಬ್ಬೊಬ್ಬರದೇ ವಿವರ ಬಹಿರಂಗವಾಗುತ್ತಿದೆ.

ಶಾರೂಖ್‌ ಪುತ್ರ ಆರ್ಯನ್‌ ಖಾನ್‌ ಜೊತೆ ಬಂಧಿತ ಯುವತಿಯ ಹೆಸರು ಮುನ್‌ಮುನ್‌ ಧಮೇಚಾ ಎಂದು ಗೊತ್ತಾಗಿದೆ. ಆರ್ಯನ್‌ ಗೆಳೆಯ ಅರ್ಬಾಜ್‌ ಸೇಥ್‌ ಮರ್ಚಂಟ್‌ ಕೂಡಾ ಇವರ ಜೊತೆಗಿದ್ದ ಎನ್ನಲಾಗಿದೆ.

ಯಾರೀಕೆ ಮುನ್‌ಮುನ್‌ ಧಮೇಚಾ?: 39 ವರ್ಷದ ಮುನ್‌ಮುನ್‌ ಫ್ಯಾಶನ್‌ ಮಾಡೆಲ್ ಹಾಗೂ ಆಕೆ ಉದ್ಯಮಿ ಕುಟುಂಬಕ್ಕೆ ಸೇರಿದವಳು. ಆಕೆ ಮೂಲತಃ ಮಧ್ಯಪ್ರದೇಶದವಳು. ಇಲ್ಲಿನ ಸಾಗರ್‌ ಜಿಲ್ಲೆಯ ತೆಹ್ಸೀಲ್‌ ನಿವಾಸಿ. ಆದರೆ ಈಗ ಆಕೆಯ ಕುಟುಂಬದ ಯಾರು ಕೂಡಾ ಮಧ್ಯಪ್ರದೇಶದಲ್ಲಿಲ್ಲ. ಮುನ್‌ಮುನ್‌ ಶಾಲೆಯ ಓದೆಲ್ಲಾ ಆಗಿದ್ದು ಸಾಗರ್‌ ಜಿಲ್ಲೆಯಲ್ಲೇ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

ಕೋವಿಡ್‌ನಿಂದ ಸಾವನ್ನಪ್ಪಿದ್ದ ಅಮ್ಮ: ಕಳೆದ ವರ್ಷ ಕೋವಿಡ್‌ನಿಂದಾಗಿ ಮುನ್‌ಮುನ್‌ ತಾಯಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಆಕೆಯ ಅಪ್ಪ ಸಾವನ್ನಪ್ಪಿದ್ದರು. ಶಾಲಾ ವಿದ್ಯಾಭ್ಯಾಸ ಸಾಗರ್‌ ಜಿಲ್ಲೆಯಲ್ಲೇ ಆಗಿದ್ದರೂ ಆಕೆಯ ಬಗ್ಗೆ ಅಲ್ಲಿನವರಿಗೆ ಯಾವುದೇ ಮಾಹಿತಿ ಇಲ್ಲ. ಸಾಗರ್‌ ಜಿಲ್ಲೆಯಲ್ಲೇ ಆಕೆಯ ಪೋಷಕರು ವಾಸವಾಗಿದ್ದ ಮೂರಂತಸ್ತಿನ ಮನೆಯಿದ್ದು, ಸದ್ಯ ಅಲ್ಲಿ ಯಾರೂ ವಾಸವಾಗಿಲ್ಲ. 8 ವರ್ಷ ಹಿಂದೆಯೇ ಆಕೆ ಸಾಗರ್‌ ಜಿಲ್ಲೆಯಿಂದ ದೆಹಲಿಗೆ ತೆರಳಿದ್ದಳು. ಸದ್ಯ ಆಕೆ ತನ್ನ ಸೋದರ ಅಮಿತ್‌ ಧಮೇಚಾ ಜೊತೆ ದೆಹಲಿಯಲ್ಲಿ ವಾಸವಾಗಿದ್ದಾಳೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಮುನ್‌ಮುನ್‌ಗೆ 11 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಸೆಪ್ಟೆಂಬರ್‌ 22ರಂದು ಆಕೆ ಕೊನೆಯ ಬಾರಿಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್‌ ಮಾಡಿದ್ದಾಳೆ.

Click to comment

Leave a Reply

Your email address will not be published. Required fields are marked *

Advertisement
Advertisement