ಮುಂಬೈ: ರೋಚಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಿಕ್ಕಿದ್ದು ಹೇಗೆ, ಯಾವ ರೂಪದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಶಾರೂಖ್ ಖಾನ್ ಪುತ್ರನ ಲೆನ್ಸ್ ಕೇಸ್‌ನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಇನ್ನೊಂದು ಆರೋಪಿಯ ಬ್ಯಾಗ್‌ನಲ್ಲಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ಮೆಡಿಸಿನ್ ಬಾಕ್ಸ್‌ನಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿತ್ತು ಎಂದು ಎನ್‌ಸಿಬಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
Advertisement
ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ವೇಳೆ ಆರ್ಯನ್ ಖಾನ್ ಲೆನ್ಸ್ ಬಾಕ್ಸ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆತನನ್ನು 4 ಕಾಯ್ದೆಗಳ ಅಡಿ ಬಂಧಿಸಲಾಗಿದೆ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.
Advertisement
ಇದಲ್ಲದೆ ಈ ಪ್ರಕರಣದಲ್ಲಿ ಬಂಧಿತಳಾಗಿರುವ ಯುವತಿಯ ಸ್ಯಾನಿಟರಿ ಪ್ಯಾಡ್ ಹಾಗೂ ಮೆಡಿಸಿನ್ ಬಾಕ್ಸ್‌ನಲ್ಲಿ ಮಾದಕದ್ರವ್ಯಗಳು ಪತ್ತೆಯಾಗಿದೆ. ಈ ಪಾರ್ಟಿಗೂ ಮುನ್ನ ಆರ್ಯನ್ ಖಾನ್ ಹಾಗೂ ಆತನ ಗೆಳೆಯರು ನಿಷೇಧಿತ ಮಾದಕ ವಸ್ತುಗಳ ಬಗ್ಗೆ ವಾಟ್ಸಪ್‌ನಲ್ಲಿ ಚಾಟ್ ಮಾಡಿದ್ದರು ಎಂಬ ಮಾಹಿತಿಯೂ ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ
Advertisement
Advertisement
ದಾಳಿ ವೇಳೆ ಅಧಿಕಾರಿಗಳು ಚರಸ್, ಎಂಡಿಎಂಎ, ಕೊಕೇನ್ ಮುಂತಾದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಧ್ಯದಲ್ಲಿ ಹಡಗಲ್ಲಿ ಕಿಕ್ ಪಾರ್ಟಿ ನಡೆಸುತ್ತಿದ್ದ ಒಟ್ಟು 8 ಮಂದಿಯನ್ನು ಭಾನುವಾರ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇವರಲ್ಲಿ ಆರ್ಯನ್ ಖಾನ್ ಹಾಗೂ ಇನ್ನಿಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇನ್ನುಳಿದ ಐವರನ್ನು ಇಂದು ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಅಲ್ಲದೇ ಪ್ರಕರಣದಲ್ಲಿ ಬಂಧಿತರೆಲ್ಲರನ್ನೂ ಹೆಚ್ಚಿನ ವಿಚಾರಣೆಗೆ ವಶಕ್ಕೆ ಕೇಳು ಎನ್‌ಸಿಬಿ ಮುಂದಾಗಿದೆ ಎನ್ನಲಾಗಿದ್ದು, ಈ ಮೂಲಕ ಇನ್ನಷ್ಟ್ರು ಡ್ರಗ್ ಪೆಡ್ಲರ್‌ಗಳನ್ನು ಪತ್ತೆಹಚ್ಚಬಹುದು ಎನ್ನುವುದು ತನಿಖಾ ತಂಡದ ಲೆಕ್ಕಾಚಾರ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್
ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‌ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್‌ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ.