ನವದೆಹಲಿ: ಬಜೆಟ್ ಮಂಡನೆ (Budget 2025) ವೇಳೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತೆಲುಗು ಕವಿ ಮತ್ತು ನಾಟಕಕಾರ ಗುರಜದ ವೆಂಕಟ ಅಪ್ಪರಾವ್ (Gurajada Venkata Apparao) ಅವರನ್ನು ಸ್ಮರಿಸಿದ್ದಾರೆ.
ಅಪ್ಪರಾವ್ ಅವರ ʻದೇಶವೆಂದರೆ ಅದರ ಮಣ್ಣು ಮಾತ್ರವಲ್ಲ, ದೇಶವೆಂದರೆ ಅದರ ಜನರುʼ (ದೇಶಮಂತೆ ಮತ್ತಿ ಕಾಡೋಯಿ, ದೇಶಮಂತೆ ಮನುಷ್ಯೋಯಿ) ಸಾಲನ್ನು ಬಳಸಿ ಮಾತಾಡಿದ್ದಾರೆ. ಈ ಮಾತಿನಂತೆ ನಮ್ಮದು ಜನರ ಬಜೆಟ್ ಆಗಿದೆ. ವಿಕ್ಷಿತ್ ಭಾರತವೂ ಶೂನ್ಯ ಬಡತನ, ಉತ್ತಮ ಶಾಲಾ ಶಿಕ್ಷಣ, ಉತ್ತಮ ಸಮಗ್ರ ಆರೋಗ್ಯ ಸೇವೆ, 100% ಕೌಶಲ್ಯಪೂರ್ಣ ಕಾರ್ಮಿಕರು, ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ 70% ಮಹಿಳೆಯರು ಮತ್ತು ರೈತರನ್ನು ಒಳಗೊಂಡಿದೆ. ಅವರೆಲ್ಲ ನಮ್ಮ ದೇಶವನ್ನು ವಿಶ್ವದ ಆಹಾರದ ಬುಟ್ಟಿಯನ್ನಾಗಿ ಮಾಡುತ್ತಿದ್ದಾರೆ.
Advertisement
ಗುರಜದ ಅಪ್ಪರಾವ್ (1861-1915) ಅವರು ತೆಲುಗು ಭಾಷೆಯಲ್ಲಿ ತಮ್ಮ ನಾಟಕಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ನಾಟಕಗಳಲ್ಲಿ ವಿಶೇಷವಾಗಿ ಕನ್ಯಾಸುಲ್ಕಂ ಮತ್ತು ದೇಸಮುನು ಪ್ರೇಮಿಂಚುಮನ್ನಾ ಬಹಳ ಪ್ರಮುಖವಾಗಿವೆ.
Advertisement
ಆಂಧ್ರಪ್ರದೇಶದ (Andhra Prades) ಇಂದಿನ ಎಲಮಂಚಿಲಿಯಲ್ಲಿ ಜನಿಸಿದ ಅಪ್ಪರಾವ್ ವಿಜಯನಗರದ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಬಳಿಕ ಅದೇ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
Advertisement
Advertisement
ನಾಟಕಗಳು, ಸಣ್ಣ ಕಥೆಗಳು ಮತ್ತು ಕಾವ್ಯಗಳನ್ನು ಅವರು ಬರೆದಿದ್ದಾರೆ. ತೆಲುಗು ಭಾಷಿಕರ ಮತ್ತು ಕಳಿಂಗ (ಒಡಿಶಾ) ಭೂಮಿಯ ಇತಿಹಾಸವನ್ನು ಸಂಶೋಧಿಸಿ ಅದರ ಇತಿಹಾಸವನ್ನು ಬರೆಯಲು ಅವರು ಯೋಜಿಸಿದ್ದರು. ಅವರು 1915 ರಲ್ಲಿ ನಿಧನರಾದರು.
ನಿರ್ಮಲಾ ಅವರ 8ನೇ ಬಜೆಟ್‌ನಲ್ಲಿ MSME ವಲಯ, ಮಹಿಳೆಯರು, ರೈತರು, ಶಿಕ್ಷಣ ವಲಯ ಮತ್ತು ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಯಾಯಿತಿಗಳನ್ನು ಘೋಷಿಸಲಾಗಿದೆ.