ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮೇಲೆ ಇಂದು ಬಿಳಿ ಪಾರಿವಾಳಗಳು (White Pigeons) ಹಾರಿದ್ದು ಕ್ರಿಕೆಟ್ ಪ್ರೇಮಿಗಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟೆಸ್ಟ್ ಕ್ರಿಕೆಟಿಗೆ (Test Cricket) ವಿರಾಟ್ ಕೊಹ್ಲಿ (Virat Kohli) ನಿವೃತ್ತಿ ಹೇಳಿದ್ದಕ್ಕೆ ಇಂದು ಅಭಿಮಾನಿಗಳು ಬಿಳಿ ಬಣ್ಣ ಜರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿದ್ದಾರೆ. ಮಳೆಯಿಂದಾಗಿ (Rain) ಪಂದ್ಯ ಸರಿಯಾದ ಸಮಯದಲ್ಲಿ ಆರಂಭವಾಗಿಲ್ಲ. ತುಂತುರು ಮಳೆ ಬೀಳುವ ಸಮಯದಲ್ಲೇ ಆಕಾಶದಲ್ಲಿ ಬಿಳಿ ಬಣ್ಣದ ಪಾರಿವಾಳಗಳು ಹಾರಿ ಹೋಗಿವೆ. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?
just WOW!🥺♥️
nature’s tribute to #ViratKohli as well…😍
🕊🏟🕊
even the whites in the sky made rounds over #Chinnaswamy
— WhiteArmy🤍#RCBvKKR #IPL2025 #RCB pic.twitter.com/cFJw12bDbP
— ಸನತ್ ಕುಮಾರ್ (@IamSanathKumar) May 17, 2025
ಕೊಹ್ಲಿ ಅಭಿಮಾನಿಗಳು ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಕ್ಕೆ ಕೊಹ್ಲಿಗೆ ಗೌರವ ಸಲ್ಲಿಸಲು ಬಿಳಿ ಪಾರಿವಾಳಗಳು ಸ್ಟೇಡಿಯಂ ಮೇಲೆ ಹಾರಿವೆ ಎಂದು ಬಣ್ಣಿಸಿದ್ದಾರೆ. ವಿರಾಟ್ ಕೊಹ್ಲಿಗೂ ಪ್ರಕೃತಿಯೂ ಗೌರವ ಸಲ್ಲಿಸಿದೆ. ಆಕಾಶದಲ್ಲಿರುವ ಬಿಳಿಯರು ಕೂಡ ಚಿನ್ನಸ್ವಾಮಿಯ ಮೇಲೆ ಹಾರಿದ್ದಾರೆ – ವೈಟ್ ಆರ್ಮಿ ಎಂದು ಬರೆದಿದ್ದಾರೆ.
ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ(Virat Kohli) ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್‌ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದರೆ ದಿಢೀರ್ ನಿವೃತ್ತಿ ಘೋಷಿಸಿದ್ದರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್ ಇಂದಿನ ಪಂದ್ಯಕ್ಕೆ ಕೊಹ್ಲಿಗೆ ಗೌರವ ಸಲ್ಲಿಸಲು ನಂಬರ್ 18ರ ವೈಟ್ ಜೆರ್ಸಿ(White Jersy) ಧರಿಸಿ ಬಂದಿದ್ದಾರೆ. ಇದನ್ನೂ ಓದಿ: 40,000 ಫ್ಯಾನ್ಸ್‌ಗಳಿಂದ ವೈಟ್ ಜೆರ್ಸಿಯಲ್ಲಿ `ಕಿಂಗ್ ಕೊಹ್ಲಿ’ಗೆ ಗೌರವ