ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

Public TV
1 Min Read
Sharat Khadri 1

ತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ವಕೀಲ ಜಗದೀಶ್ ಜತೆ ಮೊದ ಮೊದಲು ಕೇವಲ ವಕೀಲರು ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸ್ಯಾಂಡಲ್ ವುಡ್ ನಿರ್ದೇಶಕರು ಕೂಡ ಜತೆಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಜಗದೀಶ್ ಜತೆ ಇದ್ದ ವ್ಯಕ್ತಿ ಬೇರೆ ಯಾರೂ ಅಲ್ಲ, ಕನ್ನಡದಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಶರತ್ ಕದ್ರಿ.

2014 ರ ಹೊತ್ತಿಗೆ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದವರು ಶರತ್. ಅದೇ ವರ್ಷದಲ್ಲೇ ಅವರು “ಸ್ಯಾಂಡಲ್ ವುಡ್ ಸರಿಗಮ” ಚಿತ್ರಕ್ಕೆ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಸಿಂಧು ಲೋಕನಾಥ್ ನಾಯಕಿ. ಅಷ್ಟೇನೂ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲಿಲ್ಲ. ಆನಂತರ ಕ್ರೌಡ್ ಫಂಡೆಡ್ ಸಿನಿಮಾ ಮಾಡುತ್ತೇನೆ ಎಂದು ಓಡಾಡಿದರು. ಅದಕ್ಕಾಗಿ ಅವರು ಕೆಲವು ಯೋಜನೆಗಳನ್ನೂ ಹಾಕಿಕೊಂಡರು. ಜನರಿಂದ ಹಣ ಸಂಗ್ರಹಿಸಿ ಮಾಡಬೇಕಾಗಿದ್ದ ಚಿತ್ರಕ್ಕೆ “ಮರೆಯಲಾರೆ” ಎಂದು ಹೆಸರಿಟ್ಟರು. ಆ ಸಿನಿಮಾ ಕೂಡ ಅವರನ್ನು ಕೈ ಹಿಡಿಯಲಿಲ್ಲ. ಅಲ್ಲಿಂದ ಅವರು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಸಿನಿಮಾ ರಂಗದಲ್ಲಿ ಅಷ್ಟೇನೂ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ವಕೀಲ ಜಗದೀಶ್ ಅವರ ಜತೆಯಾಗಿ ಹೋರಾಟಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

Sharat Khadri

ಈ ಶರತ್ ಕದ್ರಿ ಸಿನಿಮಾ ರಂಗಕ್ಕೂ ಬರುವ ಮುನ್ನ ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವರು. ವಾರದ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರವನ್ನು ಹವ್ಯಾಸಕ್ಕೆ ಬಳಸಿಕೊಂಡವರು. ಮೊದ ಮೊದಲ ಕಿರುಚಿತ್ರ, ಜಾಹೀರಾತು ಚಿತ್ರಗಳನ್ನು ಮಾಡಿ ನಂತರ ಸಿನಿಮಾ ಮಾಡಲು ಮುಂದಾದರು. ಈಗಲೂ ಅವರಿಗೆ ಸಿನಿಮಾ ಮಾಡುವ ಆಸಕ್ತಿಯಿದೆ. ಅದಕ್ಕಾಗಿ ಅವರು ನಿರ್ಮಾಪಕರನ್ನು ಹುಡುಕತ್ತಲೇ ಇದ್ದಾರೆ. ಇದನ್ನೂ ಓದಿ: ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?

Share This Article
Leave a Comment

Leave a Reply

Your email address will not be published. Required fields are marked *