ಕುಸ್ತಿಪಟುಗಳ ಮೇಲೆ ಅತ್ಯಾಚಾರವಾದರೆ ದೇಶದ ಮೇಲೆ ಅತ್ಯಾಚಾರವಾದಂತೆ: ನಟ ಕಿಶೋರ್

Public TV
1 Min Read
kishor 1

ಬೆಂಗಳೂರು: ಕಳೆದ ಹಲವು ದಿನಗಳಿಂದ ಭಾರತದ ಕುಸ್ತಿಪಟುಗಳು (Wrestlers) ಭಾರತೀಯ ಕುಸ್ತಿ ಫೆಡರೇಷನ್ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿರುವ ನಟ ಕಿಶೋರ್ (Kishore) ಅವರ ಮೇಲೆ ಅತ್ಯಾಚಾರವಾದರೆ ದೇಶದ ಮೇಲೆ ಅತ್ಯಾಚಾರವಾದಂತೆ ಎಂದು ಹೇಳಿದ್ದಾರೆ.

KISHORE

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಿಶೋರ್, ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದಿದ್ದು ನಿಜವಾದರೆ, ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ. ಇಂದು ಅವರು ಸೋತರೆ ಭಾರತ ಸೋಲುತ್ತದೆ. ದೇಶದ ಗೌರವ ಹೆಚ್ಚಾಗುವುದು ಬೇರೆ ದೇಶದಲ್ಲೂ ನಮ್ಮ ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ರ‍್ಯಾಲಿಯ ನಾಟಕಗಳಿಂದಲ್ಲ. ಜೀವ ತೇಯ್ದು ಬೆವರು ಹರಿಸಿ ಈ ಪಟುಗಳು ತಂದ ಮೆಡಲ್‌ಗಳಿಂದ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ : ಕುಸ್ತಿಪಟುಗಳಿಗೆ ಸಿಂಗ್‌ ಸವಾಲ್‌

Wrestlers Protest

ಒಲಿಂಪಿಕ್ಸ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಕ್ರೀಡಾಪಟುಗಳು ಈ ವರ್ಷದ ಜನವರಿಯಲ್ಲಿ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಮಹಿಳಾ ಕ್ರೀಡಾಪಟುಗಳಿಗೆ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಇದುವರೆಗೆ ತನಿಖೆಯಲ್ಲಿ ಸಿಂಗ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ.

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಬ್ರಿಜ್ ಭೂಷಣ್ ಸಿಂಗ್, ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

Share This Article