LatestLeading NewsMain PostNational

MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

ನವದೆಹಲಿ: MIG-21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ನಿನ್ನೆ ನಡೆದ ಅಪಘಾತದಿಂದ ಮೃತಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಮಿಗ್-21 ವಿಮಾನಗಳನ್ನು `ಹಾರುವ ಶವಪೆಟ್ಟಿಗೆ’ ಎಂದು ಕರೆದಿದ್ದಾರೆ. ಈ ವಿಮಾನವನ್ನು ಸೇವೆಯಿಂದ ತೆಗೆದು ಹಾಕೋದು ಯಾವಾಗ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ  ಓದಿ: ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

ಗುರುವಾರ ರಾತ್ರಿ ನಡೆದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ ಹಾಗೂ ದುಃಖಿತವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಿಗ್-21 ವಿಮಾನಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವಿಮಾನವು ಇಲ್ಲಿಯ ವರೆಗೆ 200 ಪೈಲೆಟ್‌ಗಳನ್ನು ಬಲಿ ಪಡೆದಿವೆ. ಈ ಹಾರುವ ಶವಪೆಟ್ಟಿಗೆಯನ್ನು ನಮ್ಮ ವಾಯುಪಡೆಯಿಂದ ಯಾವಾಗ ತೆಗೆದುಹಾಕಲಾಗುತ್ತದೆ? ಸಂಸತ್ತು ಯೋಚಿಸಬೇಕು, ನಾವು ನಮ್ಮ ಮಕ್ಕಳಿಗಾದರೆ ಈ ವಿಮಾನವನ್ನು ಹಾರಿಸಲು ಬಿಡುತ್ತೇವೆಯೇ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ  ಓದಿ: ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

ಏನಿದು ಘಟನೆ?
ನಿನ್ನೆ ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡು ವಿಂಗ್ ಕಮಾಂಡರ್ ಎಂ.ರಾಣಾ ಮತ್ತು ಫೈಟ್ ಲೆಫ್ಟಿನೆಂಟ್ ಅದ್ವಿತೀಯ ಬಾಲ್ ಮೃತಪಟ್ಟಿದ್ದಾರೆ. ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿ, ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಅಲ್ಲಿನ ಸ್ಥಿತಿಗತಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು.

Live Tv

Leave a Reply

Your email address will not be published. Required fields are marked *

Back to top button