ಚೆನ್ನೈ: ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಯಾರದರೂ ಮಾತನಾಡಿದರೆ ನನಗೆ ನೋವಾಗುತ್ತೆ ಎಂದು ದಕ್ಷಿಣ ಭಾರತದ ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಂಡಿದ್ದರು. ಈ ಹಿನ್ನೆಲೆ ಅಕ್ಕಿನೇನಿ ಕುಟುಂಬದ ಬಗ್ಗೆ ಹಲವು ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಕುರಿತು ಅಕ್ಕಿನೇನಿ ಕುಟುಂಬ ಎಂದೂ ಒಂದು ಮಾತನ್ನು ಆಡಿರಲಿಲ್ಲ. ಆದರೆ ಈಗ ನಾಗಾರ್ಜುನ್ ಈ ಕುರಿತು ಮಾತನಾಡಿದ್ದು, ಕೆಲವರು ನಮ್ಮ ಕುಟುಂಬದ ಬಗ್ಗೆ ಅಸಹ್ಯವಾಗಿ ವರದಿ ಮಾಡುವುದನ್ನು ನೋಡಿ ನಾನು ಬೇಸರ ಪಟ್ಟಿಕೊಂಡಿದ್ದೇನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ಕಾರಜೋಳ
Advertisement
Advertisement
ಎಲ್ಲರಿಗೂ ಅವರವರ ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯವಿದೆ. ಮೊದಲು ಈ ಸುದ್ದಿ ಕೇಳಿ ನಮಗೂ ಆಘಾತವಾಗಿತ್ತು. ಆದರೆ ಇದಕ್ಕೆ ಹೆಚ್ಚು ಬಣ್ಣ ಕಟ್ಟಿ ಹೇಳುತ್ತಿರುವುದನ್ನು ಕೇಳಿ ತುಂಬಾ ನೋವಾಗಿದೆ. ಇದರಿಂದ ನನ್ನ ಕುಟುಂಬ ಕುಗ್ಗಿದೆ. ಯಾರೂ ನಮ್ಮ ಕುಟುಂಬದ ಮೇಲೆ ಕೆಟ್ಟ ವಂದತಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.
Advertisement
Advertisement
ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದರು. ಈ ಕುರಿತು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ನಿರ್ಧಾರವನ್ನು ನೀವು ಗೌರವಿಸಿ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ
ನಾಗಾರ್ಜುನ್ ಅವರು ಮಗ ನಾಗಚೈತನ್ಯ ಅವರೊಂದಿಗೆ ‘ಬಂಗಾರರಾಜು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಸಂಕ್ರಾಂತಿ ದಿನ ಈ ಸಿನಿಮಾ ರಿಲೀಸ್ ಆಗಿತ್ತು. ಜನರು ಸಹ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ. ಪ್ರಸ್ತುತ ನಾಗಾರ್ಜುನ ಅವರು ತೆಲುಗಿನಲ್ಲಿ ‘ಥ್ಯಾಂಕ್ ಯೂ’ ಮತ್ತು ಅಮೀರ್ ಖಾನ್ ಜೊತೆಗಿನ ಬಾಲಿವುಡ್ ಚೊಚ್ಚಲ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.