ವಾಷಿಂಗ್ಟನ್: ವಾಟ್ಸಪ್ 2022ರಲ್ಲಿ ಹಲವು ಹಳೆಯ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಸಿದ್ಧವಾಗಿದೆ. ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಆಂಡ್ರಾಯ್ಡ್ ಹಾಗೂ ಐಒಎಸ್‌ನ ಹಳೆಯ ಆವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇತ್ತೀಚಿನ ವರದಿ ತಿಳಿಸಿದೆ.
ಹೌದು, ವಾಟ್ಸಪ್ ಒಂದು ವೇಳೆ ನಿಮ್ಮ ಹಳೆಯ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಸಂದೇಶ, ಫೋಟೋ ವೀಡಿಯೋಗಳನ್ನು ಇತರರಿಗೆ ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ 4.1 ಆವೃತ್ತಿ ನಂತರದ ಓಎಸ್ ಮತ್ತು ಐಒಎಸ್ 10 ಹಾಗೂ ಅದರ ನಂತರದ ಆವೃತ್ತಿಗಳಲ್ಲಿ ಮಾತ್ರವೇ ವಾಟ್ಸಪ್ ಬಳಕೆ ಸಾಧ್ಯವಾಗಲಿದೆ.
Advertisement
Advertisement
ನಿಮ್ಮ ಹಳೆಯ ಫೋನ್‌ನಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು ನಿಮ್ಮ ಫೋನ್‌ನ ಸಾಫ್ಟ್‌ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸುವುದು ಅಗತ್ಯ. ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಸಾಫ್ಟ್‌ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸಬಹುದು. ಇದನ್ನೂ ಓದಿ: ವೊಡಾಫೋನ್ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ
Advertisement
ಗಮನಿಸಬೇಕಾದ ವಿಷಯವೆಂದರೆ ವಾಟ್ಸಪ್ ಇಂಡಿಯಾ ಇದನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಬ್ರೆಜಿಲ್‌ನ ಹಲವು ಫೋನ್‌ಗಳಲ್ಲಿ ವಾಟ್ಸಪ್ ಕಾರ್ಯ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಶೀಘ್ರವೇ ಭಾರತ ಹಾಗೂ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸುವ ಸಾಧ್ಯತೆ ಇದೆ. 2022ರಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಫೋನ್‌ಗಳ ಪಟ್ಟಿ ಇಲ್ಲಿದೆ.
Advertisement
ಆಂಡ್ರಾಯ್ಡ್ ಫೋನ್‌ಗಳು:
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ರೆಂಡ್ 2, ಮಿನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್3, ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ 2, ಸ್ಯಾಮ್ಸಂಗ್ ಗ್ಯಾಲಕ್ಸಿ ಎಕ್ಸ್ಕವರ್ 2, ಸ್ಯಾಮ್ಸಂಗ್ ಗ್ಯಾಲಕ್ಸಿ ಕೋರ್.
ಎಲ್‌ಜಿ ಲುಸಿಡ್ 2, ಎಲ್‌ಜಿ ಆಪ್ಟಿಮಸ್ ಎಫ್7, ಎಲ್‌ಜಿ ಆಪ್ಟಿಮಸ್ ಎಲ್3 2ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್5, ಎಲ್‌ಜಿ ಆಪ್ಟಿಮಸ್ ಎಲ್5 2, ಎಲ್‌ಜಿ ಆಪ್ಟಿಮಸ್ ಎಲ್5 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಲ್3 2, ಎಲ್‌ಜಿ ಆಪ್ಟಿಮಸ್ ಎಲ್7 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್7 2, ಎಲ್‌ಜಿ ಆಪ್ಟಿಮಸ್ ಎಫ್6, ಎಲ್‌ಜಿ ಆ್ಯಕ್ಟ್, ಎಲ್‌ಜಿ ಆಪ್ಟಿಮಸ್ ಎಲ್4 2 ಡ್ಯುಯಲ್, ಎಲ್‌ಜಿ ಆಪ್ಟಿಮಸ್ ಎಫ್3, ಎಲ್‌ಜಿ ಆಪ್ಟಿಮಸ್ ಎಲ್4 2, ಎಲ್‌ಜಿ ಆಪ್ಟಿಮಸ್ ಎಲ್2 2, ಎಲ್‌ಜಿ ಆಪ್ಟಿಮಸ್ ಎಫ್3ಕ್ಯೂ, ಇದನ್ನೂ ಓದಿ: ನೋಟಿಫಿಕೇಶನ್‌ನಲ್ಲಿ ಪ್ರೊಫೈಲ್ ಫೋಟೋ – ಐಒಎಸ್‌ಗೂ ಬರಲಿದೆ ವಾಟ್ಸಪ್‌ನ ಹೊಸ ಫೀಚರ್
ಝಡ್‌ಟಿಇ ಗ್ರಾಂಡ್ ಎಕ್ಸ್ ಕ್ವಾಡ್ ವಿ987, ಝಡ್‌ಟಿಇ ಗ್ರಾಂಡ್ ಮೆಮೊ, ಝಡ್‌ಟಿಇ ಗ್ರಾಂಡ್ ಎಸ್ ಫ್ಲೆಕ್ಸ್, ಝಡ್‌ಟಿಇ ವಿ956 – ಯುಎಮ್‌ಐ ಎಕ್ಸ್2, ಹುವಾವೇಯ್ ಆಸ್ಕೆನ್ಡ್ ಜಿ740, ಹುವಾವೆ ಆಸ್ಕೆನ್ಡ್ ಮೇಟ್, ಹುವಾವೇ ಆಸ್ಕೆನ್ಡ್ ಡಿ2, ವಿಕೊ ಸಿಂಕ್ ಫೈವ್, ವಿಕೊ ಡಾರ್ಕ್ನೈಟ್, ಕ್ಯಾಟರ್ಪಿಲ್ಲರ್ ಕ್ಯಾಟ್ ಬಿ15, ಸೋನಿ ಎಕ್ಸ್ಪೀರಿಯಾ ಎಂ, ಟಿಹೆಚ್‌ಎಲ್ ಡಬ್ಲ್ಯೂ8, ಲೆನೊವೊ 0820, ಫೇಯಾ ಎಫ್1, ಆರ್ಕೋಸ್ 53 ಪ್ಲಾಟಿನಂ, ಹೆಚ್‌ಟಿಸಿ ಡಿಸೈರ್ 500. ಇದನ್ನೂ ಓದಿ: ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ
ಐಒಎಸ್ ಫೋನ್‌ಗಳು:
ಆ್ಯಪಲ್ ಐಫೋನ್ ಎಸ್‌ಇ (16ಜಿಬಿ), ಆ್ಯಪಲ್ ಐಫೋನ್ ಎಸ್‌ಇ (32ಜಿಬಿ), ಆ್ಯಪಲ್ ಐಫೋನ್ ಎಸ್‌ಇ (64ಜಿಬಿ), ಆ್ಯಪಲ್ ಐಫೋನ್ 6ಎಸ್(64ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (128ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (16ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (32ಜಿಬಿ), ಆ್ಯಪಲ್ ಐಫೋನ್ 6ಎಸ್ ಪ್ಲಸ್ (64ಜಿಬಿ), ಆ್ಯಪಲ್ ಐಫೋನ್ 6ಎಸ್ (128ಜಿಬಿ), ಆ್ಯಪಲ್ ಐಫೋನ್ 6ಎಸ್ (16ಜಿಬಿ), ಆ್ಯಪಲ್ ಐಫೋನ್ 6ಎಸ್ (32ಜಿಬಿ).